×
Ad

ಫೇಸ್‌ಬುಕ್‌ನಲ್ಲಿ ಆದಿತ್ಯನಾಥ್ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ

Update: 2018-04-20 18:52 IST

ಹೊಸದಿಲ್ಲಿ,ಎ.20: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಫೇಸ್‌ಬುಕ್‌ನಲ್ಲಿ ದೇಶದ ಇತರ ಮುಖ್ಯಮಂತ್ರಿಗಳಿಗಿಂತ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರ ಪೇಜ್ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ಅವರನ್ನೂ ಹಿಂದಿಕ್ಕಿದೆ ಎಂದು ಫೇಸ್‌ಬುಕ್ ತನ್ನ ರ್ಯಾಂಕಿಂಗ್ ವರದಿಯಲ್ಲಿ ಹೇಳಿದೆ.

 ಭಾರತದಲ್ಲಿಯ ಸರಕಾರಿ ಸಂಸ್ಥೆಗಳು,ಸಚಿವರು ಮತ್ತು ರಾಜಕೀಯ ಪಕ್ಷಗಳ ಅಗ್ರಸ್ಥಾನಗಳಲ್ಲಿರುವ ಫೇಸ್‌ಬುಕ್ ಪೇಜ್‌ಗಳ ಪಟ್ಟಿಯನ್ನು ನಾವು ಇತ್ತೀಚಿಗೆ ಬಿಡುಗಡೆಗೊಳಿಸಿದ್ದೇವೆ. ಇದು 2017,ಜ.1 ಮತ್ತು 2017,ಡಿ.31ರ ನಡುವಿನಲ್ಲಿ ಈ ಖಾತೆಗಳ ಜನಪ್ರಿಯತೆ ಹಾಗೂ ಶೇರ್ ಮತ್ತು ಕಮೆಂಟ್ ಇತ್ಯಾದಿಗಳನ್ನು ಆಧರಿಸಿದೆ. ಭಾರತದ ಮುಖ್ಯಮಂತ್ರಿಗಳ ವರ್ಗದಲ್ಲಿ ಆದಿತ್ಯನಾಥರ ಪೇಜ್ ಮೊದಲ ಸ್ಥಾನದಲ್ಲಿದೆ ಎಂದು ಫೇಸ್‌ಬುಕ್ ಉತ್ತರ ಪ್ರದೇಶ ಸರಕಾರಕ್ಕೆ ರವಾನಿಸಿರುವ ಸಂದೇಶದಲ್ಲಿ ತಿಳಿಸಿದೆ.

ಆದಿತ್ಯನಾಥ್ ಫೇಸ್‌ಬುಕ್‌ನಲ್ಲಿ 50 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಅತ್ಯಂತ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಭಾರತೀಯರಾಗಿ ಮುಂದುವರಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News