×
Ad

ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಶಾಸಕ ಕುಲ್‌ದೀಪ್ ಸೇಂಗರ್‌ನ ಭದ್ರತೆ ಹಿಂಪಡೆದ ಸರಕಾರ

Update: 2018-04-20 19:20 IST

ಲಕ್ನೊ, ಎ.20: ಉನ್ನಾವೋದಲ್ಲಿ 15ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧನದಲ್ಲಿರುವ ಉತ್ತರಪ್ರದೇಶದ ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೇಂಗರ್‌ಗೆ ನೀಡಿರುವ ಭದ್ರತೆಯನ್ನು ಉತ್ತರಪ್ರದೇಶ ಸರಕಾರ ಹಿಂಪಡೆದಿದೆ. ಕುಲ್‌ದೀಪ್ ಸೇಂಗರ್‌ಗೆ ‘ವೈ’ ದರ್ಜೆಯ ಭದ್ರತೆ ನೀಡಲಾಗಿದ್ದು, ಇದರಂತೆ ಕಮಾಂಡೋ ಹಾಗೂ ಪೊಲೀಸರನ್ನು ಒಳಗೊಂಡ 11 ಭದ್ರತಾ ಸಿಬ್ಬಂದಿಯನ್ನು ಒದಗಿಸಲಾಗಿತ್ತು.

ಉನ್ನಾವೋದಲ್ಲಿ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕುಲ್‌ದೀಪ್ ಸೇಂಗರ್‌ನನ್ನು ಸಿಬಿಐ ಬಂಧಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಸೇಂಗರ್ ವಿರುದ್ಧ ಮೂರು ಪ್ರಕರಣ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News