ಮುಖ್ಯ ನ್ಯಾಯಾಧೀಶರ ಪದಚ್ಯುತಿ ನಿರ್ಣಯಕ್ಕೆ ಮನ್‌ಮೋಹನ್ ಸಿಂಗ್ ಸಹಿ ಹಾಕಿಲ್ಲ ಏಕೆ?

Update: 2018-04-20 14:02 GMT

ಹೊಸದಿಲ್ಲಿ, ಎ.20: ಭಾರತೀಯ ಮುಖ್ಯ ನ್ಯಾಯಾಧೀಶರ ಪದಚ್ಯುತಿ ನಿರ್ಣಯಕ್ಕೆ ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ಧುರೀಣ ಮನ್‌ಮೋಹನ್ ಸಿಂಗ್ ಹಾಕಲು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಏಳು ರಾಜಕೀಯ ಪಕ್ಷಗಳ 71 ಸಂಸದರು ಮುಖ್ಯ ನ್ಯಾಯಾಧೀಶರ ಪದಚ್ಯುತಿ ನಿರ್ಣಯಕ್ಕೆ ಈಗಾಗಲೇ ಸಹಿ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಸಿಂಗ್ ಮಾಜಿ ಪ್ರಧಾನಿಯಾಗಿರುವ ಕಾರಣ ಈ ನಿರ್ಣಯಕ್ಕೆ ಸಹಿ ಹಾಕಲು ಅವರಲ್ಲಿ ಮನವಿ ಮಾಡಿಲ್ಲ ಎಂದು ತಿಳಿಸಿದೆ. ಶುಕ್ರವಾರದಂದು ಮುಖ್ಯ ನ್ಯಾಯಾಧೀಶರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಕಾಂಗ್ರೆಸ್, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ತಿಳಿಸಿದೆ. ಪಕ್ಷದ ನಿಲುವನ್ನು ಸಮರ್ಥಿಸಿದ ಕಪಿಲ್ ಸಿಬಲ್, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರೇ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದನ್ನು ಒಪ್ಪುತ್ತಾರೆ ಎಂದು ತಿಳಿಸಿದ್ದಾರೆ. ಶ್ರೇಷ್ಟ ನ್ಯಾಯಾಲಯದ ನ್ಯಾಯಾಧೀಶರೇ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುತ್ತಿರುವಾಗ ರಾಷ್ಟ್ರವು ಏನೂ ಮಾಡದೆ ಸುಮ್ಮನಿರಬೇಕೇ? ಎಂದು ಪ್ರಶ್ನಿಸಿದ ಸಿಬಲ್, ನಮ್ಮ ಸಾಂವಿಧಾನಿಕ ರಚನೆಯಲ್ಲಿ ಇಂಥ ದಿನ ಬರಲೇ ಬಾರದಿತ್ತು. ದೀಪಕ್ ಮಿಶ್ರಾ ಮುಕ್ಯ ನ್ಯಾಯಾಧೀಶರಾಗಿ ನೇಮಕಗೊಂಡ ದಿನದಿಂದ ಅವರು ಕೆಲವು ಪ್ರಕರಣಗಳಲ್ಲಿ ನಡೆದುಕೊಂಡ ರೀತಿ ಪ್ರಶ್ನೆಗಳನ್ನು ಉಂಟುಮಾಡಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News