ರಜಿನಿಕಾಂತ್ ‘ಕಾಲಾ’ ಬಿಡುಗಡೆ ದಿನಾಂಕ ಫಿಕ್ಸ್

Update: 2018-04-21 09:11 GMT

ಚೆನ್ನೈ, ಎ.21: ಈ ವರ್ಷದ ಬಹುನಿರೀಕ್ಷಿತ, ರಜಿನಿಕಾಂತ್ ಅಭಿನಯದ ‘ಕಾಲಾ’ ಚಿತ್ರದ ಬಿಡುಗಡೆ ದಿನಾಂಕ ರಹಸ್ಯವಾಗೇ ಉಳಿದಿತ್ತು. ಈ ಮೊದಲು ಚಿತ್ರವು ಎಪ್ರಿಲ್ 27ರಂದು ಬಿಡುಗಡೆಯಾಗುತ್ತದೆ ಎನ್ನಲಾಗಿತ್ತಾದರೂ ತಮಿಳು ಚಿತ್ರರಂಗದ ಮುಷ್ಕರದಿಂದಾಗಿ ಚಿತ್ರವು ಜೂನ್ 7ರಂದು ಬಿಡುಗಡೆಯಾಗಲಿದೆ.

ಸೆನ್ಸಾರ್ ಬೋರ್ಡ್ ನಿಂದ ಚಿತ್ರಕ್ಕೆ ಪ್ರಮಾಣ ಪತ್ರ ಲಭಿಸಿದೆ. ಈ ಬಗ್ಗೆ ನಟ, ನಿರ್ಮಾಪಕ, ನಿರ್ದೇಶಕ, ರಜಿನಿಕಾಂತ್ ರ ಅಳಿಯ ಧನುಷ್ ಟ್ವೀಟ್ ಮಾಡಿದ್ದು, “ವಿಶ್ವಾದ್ಯಂತ ಎಲ್ಲಾ ಭಾಷೆಗಳಲ್ಲೂ ಸೂಪರ್ ಸ್ಟಾರ್ ರಜಿನಿಕಾಂತ್ ರ ‘ಕಾಲಾ’ ಜೂನ್ 7ರಂದು ಬಿಡುಗಡೆಯಾಗಲಿದೆ” ಎಂದಿದ್ದಾರೆ.

ರಜಿನಿಕಾಂತ್ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ಪ್ರಸಿದ್ಧ ನಟ ನಾನಾ ಪಾಟೇಕರ್, ಹುಮಾ ಖುರೇಷಿ, ಸಮುದ್ರಕಣಿ, ರವಿ ಕಾಳೆ, ಧನುಷ್ ನಟಿಸಿದ್ದಾರೆ.

ಪಾ ರಂಜಿತ್ ನಿರ್ದೇಶನದ ಈ ಚಿತ್ರದ ಟೀಸರ್ ಮಾರ್ಚ್ ನಲ್ಲಿ ಬಿಡುಗಡೆಯಾಗಿದ್ದು, ದಾಖಲೆ ಸೃಷ್ಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News