ಸಂಸತ್ತನ್ನು ಮುಚ್ಚಿದ ಮೋದಿ ಸರಕಾರ ಸುಪ್ರೀಂ ಕೋರ್ಟನ್ನು ದ್ವಂಸಗೊಳಿಸುತ್ತಿದೆ: ರಾಹುಲ್ ಗಾಂಧಿ

Update: 2018-04-23 09:14 GMT

ಹೊಸದಿಲ್ಲಿ, ಎ.23: ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಿ ನರೇಂದ್ರ ಮೋದಿ ಸರಕಾರ ಸಾಂವಿಧಾನಿಕ ಸಂಸ್ಥೆಗಳನ್ನು  ನಾಶಗೈಯ್ಯುತ್ತಿದೆ ಎಂದು ಹೇಳಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿಯನ್ನು 2019ರ ಚುನಾವಣೆಯಲ್ಲಿ ಅಧಿಕಾರದಿಂದ ಕಿತ್ತೊಗೆಯುವುದಾಗಿ ಪಣ ತೊಟ್ಟರು.

ಕಾಂಗ್ರೆಸ್ ಪಕ್ಷ ಆರಂಭಿಸಿರುವ ದೇಶವ್ಯಾಪಿ 'ಸಂವಿಧಾನ ಉಳಿಸಿ' ಅಭಿಯಾನವನ್ನು ದಿಲ್ಲಿಯಲ್ಲಿ ಉದ್ಘಾಟಿಸಿ ಮಾತನಾಡಿದ ರಾಹುಲ್, ಮೋದಿ ಸರಕಾರವು ಸುಪ್ರೀಂ ಕೋರ್ಟನ್ನು ಅಪ್ಪಚ್ಚಿ ಮಾಡುತ್ತಿದೆ ಹಾಗೂ ಸಂಸತ್ತನ್ನು ಮುಚ್ಚಿದೆ'' ಎಂದು ಆರೋಪಿಸಿದರು. "ಮೋದೀಜಿ ಭಾರತದ ಗೌರವವನ್ನೇ ನಾಶಗೊಳಿಸಿದ್ದಾರೆ. ಮೋದೀಜಿಗೆ ಕೇವಲ ಮೋದೀಜಿ ಬಗ್ಗೆ ಮಾತ್ರ ಆಸಕ್ತಿಯಿದೆ'' ಎಂದು ರಾಹುಲ್ ಟೀಕಿಸಿದರು.

ಬಜೆಟ್ ಅಧಿವೇಶನದ ವೈಫಲ್ಯ ಹಾಗೂ ಮುಖ್ಯ ನ್ಯಾಯಮೂರ್ತಿಯನ್ನು ಸಾರ್ವಜನಿಕವಾಗಿ ನಾಲ್ವರು ಹಿರಿಯ ನ್ಯಾಯಾಧೀಶರುಗಳು ಟೀಕಿಸಿದ ವಿಚಾರಗಳಿಗೆ ಸಂಬಂಧಿಸಿದಂತೆ ರಾಹುಲ್ ಮೇಲಿನ ಹೇಳಿಕೆಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News