ಸರ್ನೊಬಾಟ್‌ಗೆ ತಪ್ಪಿದ ವಿಶ್ವಕಪ್ ಕಂಚು

Update: 2018-04-23 18:45 GMT

ಚಾಗ್‌ವನ್(ದ.ಕೊರಿಯಾ), ಎ.23: ಭಾರತದ ಮಹಿಳಾ ಶೂಟರ್ ರಾಹಿ ಸರ್ನೊಬಾಟ್‌ಗೆ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಕಂಚು ಕೈ ತಪ್ಪಿದೆ.

 ರಾಹಿ ಅವರು ಅರ್ಹತಾ ಸುತ್ತಿನಲ್ಲಿ 588 ಪಾಯಿಂಟ್ ದಾಖಲಿಸಿ ಫೈನಲ್ ತಲುಪಿದ್ದರು. ಇವರ ಜೊತೆ ಒಟ್ಟು 8 ಮಂದಿ ಮಹಿಳೆಯರು ಫೈನಲ್ ತಲುಪಿದ್ದರು.

ರಾಹಿ ಫೈನಲ್‌ನಲ್ಲಿ 50 ಅಂಕ ಗಳಿಸಿ ನಾಲ್ಕನೇ ಸ್ಥಾನ ಪಡೆದರು. ಚೀನಾದ ಯುಶಿ ಯಾವೊ ಕಂಚು ಪಡೆದರು. ಆಸ್ಟ್ರೇಲಿಯದ ಎಲೆನಾ ಗಲಿಯಾಬೊವಿಟೆಕ್ ಚಿನ್ನ ಮತ್ತು ಚೀನಾದ ಯುಮೈ ಲಿನ್ ಬೆಳ್ಳಿ ತನ್ನದಾಗಿಸಿಕೊಂಡರು.

 ಅರ್ಹತಾ ಸುತ್ತಿನಲ್ಲಿ 92 ಶೂಟರ್‌ಗಳ ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಭಾರತದ ಹೀನಾ ಸಿಧು 37ನೇ ಮತ್ತು ಅನುರಾಜ್ ಸಿಂಗ್ 41ನೇ ಸ್ಥಾನದೊಂದಿಗೆ ನಿರ್ಗಮಿಸಿದ್ದರು.

10 ಮೀ ಏರ್‌ರೈಫಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಭಾರತದ ರವಿ ಕುಮಾರ್ ಮತ್ತು ಅಪೂರ್ವಿ ಚಾಂಡೆಲಾ ಫೈನಲ್ ತಲುಪಿದ್ದರೂ 5ನೇ ಸ್ಥಾನ ಗಳಿಸಿದರು. ಇದೇ ವೇಳೆ ದೀಪಕ್ ಕುಮಾರ್ ಮತ್ತು ಮೆಹುಲಿ ಘೋಷ್ 8ನೇ ಸ್ಥಾನ ಗಳಿಸಿದರು.

ಮಹಿಳೆಯರ ಟ್ರಾಪ್‌ನಲ್ಲಿ ಶಾಗುನ್ ಚೌಧರಿ ಅರ್ಹತಾ ಸುತ್ತಿನಲ್ಲಿ 108 ಸ್ಕೋರ್ ದಾಖಲಿಸಿ 26ನೇ ಸ್ಥಾನ, ಶ್ರೇಯಸ್ ಸಿಂಗ್ 33ನೇ, ಸೀಮಾ ಟೋಮರ್ 47ನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News