ನೋಯ್ಡಾ: ಚಲಿಸುತ್ತಿರುವ ಕಾರಿನಲ್ಲಿ ಬಾಲಕಿಯ ಅತ್ಯಾಚಾರ

Update: 2018-04-24 14:41 GMT

ನೋಯ್ಡಾ, ಎ. 24: ಹದಿನೇಳು ವರ್ಷದ ಬಾಲಕಿಯನ್ನು ಚಲಿಸುತ್ತಿರುವ ಕಾರಿನಲ್ಲಿ ಮೂವರು ಸಾಮೂಹಿಕ ಅತ್ಯಾಚಾರಗೈದ ಘಟನೆ ಗ್ರೇಟರ್ ನೋಯ್ಡಾದಲ್ಲಿ ಎಪ್ರಿಲ್ 18ರಂದು ನಡೆದಿದೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಓರ್ವ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರೇಟರ್ ನೋಯ್ಡಾದ ನಿವಾಸಿಯಾಗಿರುವ ಹಾಗೂ 11ನೇ ತರಗತಿ ಬಾಲಕಿಗೆ ಅಪರಾಹ್ನ 2.30ಕ್ಕೆ ಶಾಲಾ ಬಸ್ ತಪ್ಪಿದ್ದುದರಿಂದ ನಡೆದುಕೊಂಡು ಮನೆಗೆ ಹಿಂದಿರುಗುತ್ತಿದ್ದಳು. ಈ ಸಂದರ್ಭ ಕಾರಿನಲ್ಲಿ ಆಗಮಿಸಿದ ಮೂವರು ಲಿಫ್ಟ್ ನೀಡುವುದಾಗಿ ಕಾರಿಗೆ ಹತ್ತಿಸಿಕೊಂಡಿದ್ದರು. ಅನಂತರ ಆಕೆಗೆ ಮೃದು ಪಾನೀಯದಲ್ಲಿ ಮತ್ತು ಬರುವ ಔಷಧ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸಂಜೆ ಆದರೂ ಬಾಲಕಿ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸ್ ಠಾಣೆ ಸಂರ್ಪಕಿಸಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ನಡೆಸಿದಾಗ ಬಾಲಕಿ ಅರೆ ಪ್ರಜ್ಞಾವಸ್ಥೆಯಲ್ಲಿ ನೋಯ್ಡಾದ ನಾಲೆಜ್ ಪಾರ್ಕ್ ಪ್ರದೇಶದ ಎಂಜಿನಿಯರಿಂಗ್ ಕಾಲೇಜಿನ ಸಮೀಪ ಪತ್ತೆಯಾಗಿದ್ದಳು. ಆರೋಪಿಗಳಲ್ಲಿ ಓರ್ವ ಸಂತ್ರಸ್ತೆಯ ಸಂಬಂಧಿ. ಇನ್ನೋರ್ವ ಆಕೆಯ ಸಹಪಾಠಿ ಎಂದು ಗ್ರೇಟರ್ ನೋಯ್ಡಾ ಪೊಲೀಸ್ ಠಾಣೆಯ ಅಧಿಕಾರಿ ರಾಮ್ ಭವನ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News