ಮತದಾರರಲ್ಲಿ ಜಾಗೃತಿ ಮೂಡಿಸಿ

Update: 2018-04-26 18:31 GMT

ಮಾನ್ಯರೇ,

ಯಾವುದೇ ಚುನಾವಣೆ ಇರಲಿ ಬಲಿಷ್ಠ ವ್ಯಕ್ತಿಗಳು ಹಣ ಬಲದಿಂದ, ಪ್ರದರ್ಶನ, ಮೆರವಣಿಗೆ, ಪ್ರಚೋದನೆ ಇತ್ಯಾದಿಗಳಿಂದ ಗೆಲುವು ಸಾಧಿಸಲು ಯಶಸ್ವಿಯಾಗುತ್ತಾರೆ.
ಹಾಗೆಯೇ ಮತದಾರರು ಕೂಡ ಅಲ್ಪಹಣ ಹಾಗೂ ಉಡುಗೊರೆಗಾಗಿ ತಮ್ಮ ಮತವನ್ನು ಮಾರಿ ಕೊಳ್ಳುವುದು ಇದೀಗ ಸರ್ವೇ ಸಾಮಾನ್ಯವಾಗಿದೆ.
ಆದ್ದರಿಂದ ಹಣ ಇತ್ಯಾದಿ ಯಾವುದೇ ಆಮಿಷ, ಉಡುಗೊರೆ, ಭಯ ಮುಂತಾದವುಗಳಿಗೆ ಮತದಾರರು ಬಲಿಯಾಗದಂತೆ ಚುನಾವಣಾ ಆಯೋಗವು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ಗಳ ಪ್ರತಿಯೊಂದು ವಾರ್ಡ್‌ಗಳಲ್ಲಿ, ಮತದಾರರಲ್ಲಿ ಜಾಗೃತಿ ಮೂಡಿಸಿ ನ್ಯಾಯಯುತ ಹಾಗೂ ಪಾರದರ್ಶಕ ಚುನಾವಣೆಯನ್ನು ನಡೆಸುವುದರ ಮೂಲಕ ಉತ್ತಮ ವ್ಯಕ್ತಿಗಳು ಗೆಲ್ಲಲು ಅಗತ್ಯ ಕ್ರಮ ಕೈಗೊಳ್ಳಬೇಕು.

Writer - ಚಂದ್ರಶೇಖರ, ಬೆಂಗಳೂರು

contributor

Editor - ಚಂದ್ರಶೇಖರ, ಬೆಂಗಳೂರು

contributor

Similar News