ನೂರ್ ಇನಾಯತ್ ಪಾತ್ರದಲ್ಲಿ ರಾಧಿಕಾ

Update: 2018-04-27 13:10 GMT

ಅಕ್ಷಯ್‌ಕುಮಾರ್ ಜೊತೆ ಪ್ಯಾಡ್‌ಮ್ಯಾನ್ ಚಿತ್ರದಲ್ಲಿ ನಟಿಸಿದ್ದ ರಾಧಿಕಾ ಅಪ್ಟೆಗೆ ಈಗ ಹಾಲಿವುಡ್ ಕೈಬೀಸಿ ಕರೆದಿದೆ. ಹೌದು, ಎರಡನೆ ವಿಶ್ವ ಮಹಾಯುದ್ಧದಲ್ಲಿ ನಾಝಿ ಸೇನೆಯ ವಿರುದ್ಧ ಹೋರಾಡಿದ ಬ್ರಿಟಿಷ್‌ಗೂಢಚಾರಿಣಿ, ಭಾರತೀಯ ಯುವತಿ ನೂರ್ ಇನಾಯತ್‌ಳ ಪಾತ್ರ ದಲ್ಲಿ ಆಕೆ ನಟಿಸಲಿದ್ದಾರೆ. ‘ಮಿಸ್ ಅಟ್ಕಿನ್ಸ್ ಆರ್ಮಿ’ ಎಂದು ಹೆಸರಿಡ ಲಾದ ಈ ಚಿತ್ರದಲ್ಲಿ ಇಂಗ್ಲಿಷ್ ಜೊತೆಗೆ ಜರ್ಮನ್ ಹಾಗೂ ಫ್ರೆಂಚ್ ಭಾಷೆಗಳಲ್ಲೂ ಯಥೇಚ್ಛ ಸಂಭಾಷಣೆ ಗಳಿವೆಯೆನ್ನಲಾಗಿದೆ. ‘ಸ್ಲಮ್ ಡಾಗ್ ಮಿಲಿಯನೇರ್’ ಖ್ಯಾತಿಯ ಭಾರತೀಯ ನಟ ದೇವ್‌ಪಟೇಲ್ ಕೂಡಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಧಿಕಾಗಂತೂ, ಹಾಲಿವುಡ್ ಚಿತ್ರದಲ್ಲಿ ಅದರಲ್ಲೂ ನೂರ್ ಇನಾಯತ್‌ಳ ಪಾತ್ರದಲ್ಲಿ ನಟಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ. ಇದೊಂದು ಅತ್ಯಂತ ಸ್ವಾರಸ್ಯಕ ರವಾದ ಪಾತ್ರವಾಗಿದೆ ಎಂದಾಕೆ ಹೇಳಿ ಕೊಂಡಿದ್ದಾರೆ. ಒಂದು ಪ್ರತಿಭಾವಂತ ಚಿತ್ರತಂಡದ ಜೊತೆ ಕೆಲಸ ಮಾಡಲು ಅವಕಾಶ ದೊರೆತಿದ್ದು ತನ್ನ ಸಿನೆಮಾ ಬದುಕಿನ ಒಂದು ಅದ್ಭುತ ಅನುಭ ವವಾಗಲಿದೆಯೆಂದವರು ಭರವಸೆ ವ್ಯಕ್ತಪಡಿಸಿದ್ದಾರೆ. ದ್ವಿತೀಯ ಮಹಾ ಯುದ್ಧದ ಹಿನ್ನೆಲೆಯ ಕಥಾ ವಸ್ತುವನ್ನು ಹೊಂದಿ ರುವ ಈ ಚಿತ್ರಕ್ಕೆ ಹಾಲಿವುಡ್‌ನ ಜನಪ್ರಿಯ ನಿರ್ದೇಶಕಿ ಲಿಡಿಯಾ ಡೀನ್ ಪಿಲ್‌ಶೆರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ನಡುವೆ ರಾಧಿಕಾ ಅಪ್ಟೆ, ಬ್ರಿಟಿಷ್ ನಿರ್ದೇಶಕ ಮೈಕೆಲ್ ವಿಂಟರ್‌ಬಾಟಮ್‌ರ ‘ದಿ ವೆಡ್ಡಿಂಗ್ ಗೆಸ್ಟ್’ ಚಿತ್ರದ ಮುಖ್ಯಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News