300 ದಲಿತರ ಜೊತೆ ಬೌದ್ಧ ಧರ್ಮ ಸ್ವೀಕರಿಸಿದ ಊನಾ ಸಂತ್ರಸ್ತರು
Update: 2018-04-29 19:55 IST
ಹೊಸದಿಲ್ಲಿ, ಎ.29: 2016ರ ಊನಾ ಘಟನೆಯ ಸಂತ್ರಸ್ತರು ಇಂದು ಇತರ 300 ದಲಿತರೊಂದಿಗೆ ಭೌದ್ಧ ಧರ್ಮಕ್ಕೆ ಮತಾಂತರಗೊಂಡರು. ಹಿಂದೂ ಧರ್ಮದಲ್ಲಿರುವ ಜಾತಿ ಪದ್ಧತಿ ಹಾಗು ತಾರತಮ್ಯ ನೀತಿಯಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದಾಗಿ ಅವರು ಹೇಳಿದ್ದಾರೆ.
ತಾವು ಹಿಂದೂ ಧರ್ಮವನ್ನು ತ್ಯಜಿಸುವುದಾಗಿ ಊನಾ ಸಂತ್ರಸ್ತ ಯುವಕರು ಹೇಳಿಕೆ ನೀಡಿದ್ದ ನಂತರ ಅವರನ್ನು ಹಾಗು ಕುಟುಂಬಸ್ಥರನ್ನು ಪ್ರಕರಣದ ಆರೋಪಿಗಳು ಬೆದರಿಸುತ್ತಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.
2016 ಜುಲೈ 11ರಂದು ಸತ್ತ ದನವೊಂದರ ಚರ್ಮ ಸುಲಿದದ್ದಕ್ಕಾಗಿ ಗೋರಕ್ಷಕರು ನಾಲ್ವರು ದಲಿತ ಯುವಕರಿಗೆ ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿಸಿ ಥಳಿಸಿದ್ದರು. ಈ ಘಟನೆಯ ನಂತರ ಗೋರಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.