ಚೆನ್ನೈ ಸೂಪರ್ ಕಿಂಗ್ಸ್ 211/4
ಪುಣೆ, ಎ.30: ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ವೆಂಟಿ-20 ಟೂರ್ನಿಯ 30ನೇ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 4ವಿಕೆಟ್ ನಷ್ಟದಲ್ಲಿ 211 ರನ್ ಗಳಿಸಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಸೋಮವಾರ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ತಂಡಕ್ಕೆ ಆರಂಭಿಕ ದಾಂಡಿಗ ಶೇನ್ ವ್ಯಾಟ್ಸನ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅರ್ಧ ಶತಕಗಳ ಕೊಡುಗೆ ನೀಡಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ವ್ಯಾಟ್ಸನ್ 78 ರನ್(40ಎ, 4ಬೌ 7ಸಿ) ಗಳಿಸಿದರು.
ವ್ಯಾಟ್ಸನ್ ಮತ್ತು ಎಫ್‌ಡು ಪ್ಲೆಸಿಸ್ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 10.5 ಓವರ್‌ಗಳಲ್ಲಿ 102 ರನ್‌ಗಳ ಜೊತೆಯಾಟ ನೀಡಿದರು.
ಪ್ಲೆಸಿಸ್ 33 ರನ್(33ಎ, 3ಬೌ,1ಸಿ) ಗಳಿಸಿ ಔಟಾದರು. ಸುರೇಶ್ ರೈನಾ 1 ರನ್ ಗಳಿಸಿ ನಿರ್ಗಮಿಸಿದರು.
ಕೊನೆಯಲ್ಲಿ ನಾಯಕ ಧೋನಿ ಮತ್ತು ಅಂಬಟಿ ರಾಯುಡು ಭರ್ಜರಿ ಬ್ಯಾಟಿಂಗ್ ಮಾಡಿ 79 ರನ್‌ಗಳ ಜೊತೆಯಾಟ ನೀಡಿದರು. ರಾಯುಡು 41 ರನ್(24ಎ,5ಬೌ,1ಸಿ) ಗಳಿಸಿ ಔಟಾದರು.
ಧೋನಿ 51 ರನ್ (22ಎ, 2ಬೌ,5ಸಿ) ಗಳಿಸಿ ಅಜೇಯರಾಗಿ ಉಳಿದರು. ಡೆಲ್ಲಿ ತಂಡದ ಅಮಿತ್ ಮಿಶ್ರಾ, ವಿ.ಶಂಕರ್ ಮತ್ತು ಮ್ಯಾಕ್ಸ್‌ವೆಲ್ ತಲಾ 1 ವಿಕೆಟ್ ಪಡೆದರು.