×
Ad

ಬಿಜೆಪಿ, ಆರೆಸ್ಸೆಸ್ ನಿಂದ ಹಿಂದೂ ಧರ್ಮದ ಆದರ್ಶಗಳಿಗೆ ತೀವ್ರ ಹಾನಿ: ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ

Update: 2018-05-03 20:56 IST

ಹೊಸದಿಲ್ಲಿ,  ಮೇ 3: ಬಿಜೆಪಿ ಹಾಗು ಆರೆಸ್ಸೆಸ್ ಹಿಂದೂ ಧರ್ಮಕ್ಕೆ ತೀವ್ರ ಹಾನಿಯೆಸಗಿದೆ ಎಂದು ದ್ವಾರಕಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ.

ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ ಹೆಚ್ಚುತ್ತಿರುವ ಕೋಮು ಘರ್ಷಣೆಗಳ ಬಗ್ಗೆ ಮಾತನಾಡಿದ ಸ್ವರೂಪಾನಂದ ಸರಸ್ವತಿ, ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಹಾಗು ಆರೆಸ್ಸೆಸ್ ಹಿಂದೂ ಧರ್ಮಕ್ಕೆ ತೀವ್ರ ಹಾನಿಯೆಸಗಿದೆ ಎಂದರು.,

“ಭಾರತದಲ್ಲಿ ಜನಿಸಿರುವ ಪ್ರತಿಯೊಬ್ಬರೂ ಹಿಂದೂ ಎಂದು ಭಾಗವತ್ ಹೇಳುತ್ತಾರೆ. ಹಾಗಾದರೆ ಹಿಂದೂ ಪೋಷಕರಿಗೆ ಅಮೆರಿಕವೋ ಅಥವಾ ಇಂಗ್ಲೆಂಡ್ ನಲ್ಲಿ ಜನಿಸಿದ ಮಗು ಏನು?” ಎಂದು ಪ್ರಶ್ನಿಸಿದ ಅವರು, “ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಗೆ ಹಿಂದೂ ಧರ್ಮದ ಬಗ್ಗೆ ಏನೂ ತಿಳಿದಿಲ್ಲ” ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿಜೆಪಿ ನಾಯಕರು ಬಹುದೊಡ್ಡ ಬೀಫ್ ರಫ್ತುದಾರರಾಗಿದ್ದಾರೆ. ಇನ್ನೊಂದೆಡೆ ಬಿಜೆಪಿ ಗೋಹತ್ಯೆಯನ್ನು ವಿರೋಧಿಸುತ್ತಿದೆ. ಬಿಜೆಪಿ ನೀಡಿದ್ದ ಯಾವುದಾದರೂ ಭರವಸೆಯನ್ನು ಈಡೇರಿಸಿದೆಯೇ ಎಂದವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News