ಬರಲಿದೆ ಶ್ರೀದೇವಿ ಬಯೋಪಿಕ್

Update: 2018-05-05 11:47 GMT

 ಇತ್ತೀಚೆಗಷ್ಟೇ ನಿಧನರಾದ ಬಾಲಿವುಡ್‌ನ ಮೇರುನಟಿ ಶ್ರೀದೇವಿಯ ಬದುಕು ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ. ಹೌದು. ತಮಿಳು,ಹಿಂದಿ, ತೆಲುಗು,ಕನ್ನಡ, ಮಲಯಾಳಂಗೆ ಹೀಗೆ ಬಹುಭಾಷಾ ಚಿತ್ರಗಳಲ್ಲಿ ನಟಿಸಿ ಚಿತ್ರರಸಿಕರ ಮನಗೆದ್ದ ಶ್ರೀದೇವಿಯ ಬಯೋಪಿಕ್ ಚಿತ್ರವೊಂದು ನಿರ್ಮಾಣವಾಗಲಿದೆ. ಸ್ವತಃ ಶ್ರೀದೇವಿ ಪತಿ, ಖ್ಯಾತ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಬೋನಿಕಪೂರ್ ಈಗಾಗಲೇ ಈ ಚಿತ್ರಕ್ಕಾಗಿ ಶ್ರಿದೇವಿ, ಶ್ರೀ, ಶ್ರೀಂ ಮಾಮ್ ಎಂಬ ಮೂರು ಹೆಸರುಗಳನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ.

 ಚಿತ್ರದ ನಿರ್ದೇಶಕರು ಅಥವಾ ತಾರಾಗಣದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲವಾದರೂ, ಶೀಘ್ರದಲ್ಲೇ ಬೋನಿ ಕಪೂರ್ ಈ ಚಿತ್ರದ ನಿರ್ಮಾಣ ಆರಂಭಿಸುವ ಇರಾದೆ ಹೊಂದಿದ್ದಾರೆ. ಭಾರತೀಯ ಚಿತ್ರರಂಗದ ಪ್ರಪ್ರಥಮ ಲೇಡಿ ಸೂಪರ್‌ಸ್ಟಾರ್ ಎಂದೇ ಜನಪ್ರಿಯರಾಗಿದ್ದ ಶ್ರೀದೇವಿ ದುಬೈನಲ್ಲಿ ಅಕಸ್ಮಿಕವಾಗಿ ಸಾವಿಗೀಡಾಗಿದ್ದರು. ತನ್ನ ಬಂಧುವಿನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಶ್ರೀದೇವಿ, ತಾನು ತಂಗಿದ್ದ ಹೊಟೇಲ್ ಕೊಠಡಿಯ ಬಾತ್‌ಟಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News