×
Ad

ಬೆಂಗಳೂರಲ್ಲೂ ಪತ್ರಕರ್ತ ರಾಜದೀಪ್ ಬೆನ್ನು ಬಿಡದ ಟೆಕ್ಕಿ ಟ್ರೋಲ್‌ಗಳು

Update: 2018-05-08 09:32 IST

ಬೆಂಗಳೂರು, ಮೇ 8: ಹಿರಿಯ ಟಿವಿ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರೊಂದಿಗೆ ಹೋಟೆಲ್ ಒಂದರಲ್ಲಿ ಮೋದಿ ಅಭಿಮಾನಿಗಳು ವಾಗ್ವಾದ ನಡೆಸುತ್ತಿರುವ 5 ಸೆಕೆಂಡ್‌ಗಳ ವೀಡಿಯೊ ತುಣುಕನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಭಿಮಾನಿ ಎನ್ನಲಾದ ಗಿರೀಶ್ ಆಳ್ವ ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕರ್ನಾಟಕ ಚುನಾವಣೆಯ ಬಗ್ಗೆ ವರದಿ ಮಾಡಲು ಸರ್ದೇಸಾಯಿ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಸರ್ದೇಸಾಯಿ ಊಟಕ್ಕೆ ಬಂದಾಗ, ಉದ್ರಿಕ್ತ ಮೋದಿ ಅಭಿಮಾನಿಗಳ ಗುಂಪು ಅವರ ಬಳಿ ತೆರಳಿ 'ಮೋದಿ', 'ಮೋದಿ' ಎಂದು ಘೋಷಣೆ ಕೂಗಿತು. ಜತೆಗೆ "ನೀವು ಭಾರತದಲ್ಲಿ ಹುಟ್ಟಿದ್ದೀರಿ; ಹಿಂದೂಗಳನ್ನು ದ್ವೇಷಿಸಬೇಡಿ" ಎಂದು ಸರ್ದೇಸಾಯಿ ಅವರನ್ನು ಕುರಿತು ಆಗ್ರಹಿಸಿತು.

ಗಿರೀಶ್ ಆಳ್ವ ಅವರ ಲಜ್ಜೆಗೇಡಿ ಟ್ವೀಟ್, "ಇಂದು ಬೆಂಗಳೂರಿನಲ್ಲಿ ರಾಜದೀಪ್ ಅವರ ಮೆಡಿಸನ್ ಸ್ಕ್ವೇರ್ ಚಳವಳಿ" ಎಂದು ಈ ಘಟನೆಯನ್ನು ಬಣ್ಣಿಸಿದೆ. ರಿಚ್ಮಂಡ್ ಸರ್ಕಲ್ ರೆಸ್ಟೋರೆಂಟ್‌ನಲ್ಲಿ ಉಪಹಾರಕ್ಕೆ ಆಗಮಿಸಿದ್ದಾಗ, ಕೆಲ ಉದ್ರಿಕ್ತ ಟೆಕ್ಕಿಗಳ ಗುಂಪು, "ನೀವು ಹುಟ್ಟಿರುವುದು ಭಾರತದಲ್ಲಿ; ಹಿಂದೂಗಳನ್ನು ದ್ವೇಷಿಸಬೇಡಿ" ಎಂದು ಗದ್ದಲ ಎಬ್ಬಿಸಿತು. ಆಗ ಸರ್ದೇಸಾಯಿ "ನಿಮಗೆ ಸಭ್ಯತೆ ಇಲ್ಲವೇ" ಎಂದು ಪ್ರಶ್ನಿಸಿದರು. "ಸಭ್ಯತೆ ಇಲ್ಲದಿರುವುದು ನಿಮಗೆ. ನೀವು ಸುದ್ದಿಯಲ್ಲಿ ಬಹಳಷ್ಟು ಅಶ್ಲೀಲತೆಯನ್ನು ಬಳಸುತ್ತೀರಿ!" ಎಂದು ವೀಡಿಯೊ ತುಣುಕಿನಲ್ಲಿ ಹೇಳುತ್ತಿರುವುದು ತಿಳಿದುಬರುತ್ತದೆ.

ಇದೇ ಘಟನೆಯ ವೀಡಿಯೊವನ್ನು ಶೇರ್ ಮಾಡಿದ ರಾಜದೀಪ್, "ರೆಸ್ಟೋರೆಂಟ್‌ನಲ್ಲಿದ್ದ ಪ್ರತಿಯೊಬ್ಬರೂ ಎದ್ದು ಬಂದು ’ಕ್ಷಮಿಸಿ. ಈ ಗೂಂಡಾಗಳು ಬೆಂಗಳೂರು ಅಥವಾ ಭಾರತವನ್ನು ಪ್ರತಿನಿಧಿಸುವುದಿಲ್ಲ’ ಎಂದು ಹೇಳಿದ ಅಂಶವನ್ನು ಈ ಹುಡುಗರು ಹೇಳಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ. ಸರ್ದೇಸಾಯಿ ಅವರನ್ನು ಬೆಂಬಲಿಸಿ ಮಾಡಿದ "ಅರೆ ಸರ್, ಧನ್ಯವಾದಗಳು, ವೃತ್ತಿಯ ಅಪಾಯಗಳು. ಫಿರ್ ಸಭ್ ಹೋಗಿ" ಎಂಬ ಟ್ವೀಟ್‌ಗೆ "ಇನ್ನೂ ನಿರೀಕ್ಷೆ ಇದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಹಿರಿಯ ಪತ್ರಕರ್ತರಿಗೆ, ಘನತೆ ಮತ್ತು ತಾಳ್ಮೆ ಪ್ರದರ್ಶಿಸಿದ್ದಕ್ಕಾಗಿ ವ್ಯಾಪಕ ಶ್ಲಾಘನೆ ಮತ್ತು ಬೆಂಬಲ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News