ಪಿಡಬ್ಲ್ಯುಡಿ ಹಗರಣ: ಅರವಿಂದ್ ಕೇಜ್ರಿವಾಲ್ ಸಂಬಂಧಿಯ ಬಂಧನ

Update: 2018-05-10 15:42 GMT

ಹೊಸದಿಲ್ಲಿ, ಮೇ 10: ಪಿಡಬ್ಲ್ಯುಡಿ ಹಗರಣಕ್ಕೆ ಸಂಬಂಧಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಂಜ್ರಿವಾಲ್ ಅವರ ಸಂಬಂಧಿಯನ್ನು ಭ್ರಷ್ಟಾಚಾರ ತಡೆ ವಿಭಾಗ ಗುರುವಾರ ಬಂಧಿಸಿದೆ. ಬಂಧಿತ ಆರೋಪಿ ಕೇಜ್ರಿವಾಲ್ ಅವರ ಭಾವಮೈದುನ ಸುರೇಂದರ್ ಬನ್ಸಾಲ್ ಅವರ ಪುತ್ರ ವಿನಯ್ ಬನ್ಸಾಲ್.

ದಿಲ್ಲಿಯಲ್ಲಿ ರಸ್ತೆ ಹಾಗೂ ಒಳಚರಂಡಿ ಗುತ್ತಿಗೆ ನೀಡುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ದಿಲ್ಲಿ ಮುಖ್ಯಮಂತ್ರಿ ಅವರ ಭಾವಮೈದುನ ಹಾಗೂ ಇತರರ ವಿರುದ್ಧ ರೋಡ್ ಆ್ಯಂಟಿ ಕರಪ್ಶನ್ ಆರ್ಗನೈಶೇಷನ್ ನ ಸ್ಥಾಪಕ ರಾಹುಲ್ ಶರ್ಮಾ ಕಳೆದ ವರ್ಷ ಜನವರಿಯಲ್ಲಿ ಪ್ರಕರಣ ದಾಖಲಿಸಿದ್ದರು. ವಾಯುವ್ಯ ದಿಲ್ಲಿಯ ಬೊಕೋಲಿ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ನಿರ್ಮಿಸಲು 2015 ಎಪ್ರಿಲ್‌ನಲ್ಲಿ ರೇಣು ನಿರ್ಮಾಣ ಕಂಪೆನಿಗೆ ಅಕ್ರಮವಾಗಿ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇದನ್ನನುಸರಿಸಿ ಎಸಿಬಿ ಮೇಯಲ್ಲಿ ನಕಲಿ, ವಂಚನೆ ಕಾಯ್ದೆ ಅಡಿ ಪ್ರತ್ಯೇಕ ಪ್ರಥಮ ಮಾಹಿತಿ ವರದಿ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News