ಓಡ್ ಹತ್ಯಾಕಾಂಡ: 19 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದ ಹೈಕೋರ್ಟ್

Update: 2018-05-11 08:44 GMT

ಅಹ್ಮದಾಬಾದ್, ಮೇ 11: ಗೋದ್ರಾ ಹತ್ಯಾಕಾಂಡದ (2002) ಬೆನ್ನಲ್ಲೇ  ಓಡ್ ನಲ್ಲಿ ಸಂಭವಿಸಿದ  ಹತ್ಯಾಕಾಂಡಕ್ಕೆ  ಸಂಬಂಧಿಸಿ  19 ಮಂದಿಗೆ ವಿಶೇಷ ನ್ಯಾಯಾಲಯವು ವಿಧಿಸಿದ್ದ ಜೀವಾವಧಿ ಸಜೆಯನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿದೆ.

ಇದೇ ವೇಳೆ ಮೂವರನ್ನು ದೋಷಮುಕ್ತಗೊಳಿಸಿ ಶುಕ್ರವಾರ ತೀರ್ಪು ನೀಡಿದೆ.

2012ರಲ್ಲಿ ವಿಶೇಷ ನ್ಯಾಯಾಲಯವು 23 ಆರೋಪಿಗಳಲ್ಲಿ 18 ತಪ್ಪಿತಸ್ಥರಿಗೆ ಜೀವಾವಧಿ ಮತ್ತು 5 ಮಂದಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಆರೋಪಿಗಳು  ಗುಜರಾತ್ ಹೈಕೋರ್ಟ್ ಗೆ  ಮೇಲ್ಮನವಿ ಸಲ್ಲಿಸಿದ್ದರು. ಇದೇ ವೇಳೆ ಐದು ಮಂದಿ ತಪ್ಪಿತಸ್ಥರಿಗೆ 7 ವರ್ಷಗಳ ಜೈಲು ಸಜೆ ವಿಧಿಸಿರುವುದನ್ನು ಪ್ರಶ್ನಿಸಿ 23 ಮಂದಿಗೂ ಸಮಾನ ರೀತಿಯಲ್ಲಿ ಕಠಿಣ ಸಜೆ ವಿಧಿಸುವಂತೆ ಮನವಿ ಮಾಡಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಖಿಲ್ ಖುರೇಶಿ ಮತ್ತು ಬಿಎನ್ .ಕರಿಯಾ ನೇತೃತ್ವದ  ಗುಜರಾತ್ ಹೈಕೋರ್ಟ್ ನ ವಿಭಾಗೀಯ ಪೀಠ ಕಳೆದ ಎಪ್ರಿಲ್ ನಲ್ಲಿ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದ್ದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News