ಅಮಿತಾಬ್ ಬಚ್ಚನ್ ರನ್ನು ಹೇಡಿ ಎಂದ ಪ್ರಕಾಶ್ ರೈ

Update: 2018-05-11 07:22 GMT

ಹೊಸದಿಲ್ಲಿ, ಮೇ 11: ಜಮ್ಮು ಕಾಶ್ಮೀರದ ಕಥುವಾ ಎಂಬಲ್ಲಿ ನಡೆದ 8 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೌನ ವಹಿಸಿರುವ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ರನ್ನು ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರೈ ‘ಹೇಡಿ’ ಎಂದು ಕರೆದಿದ್ದಾರೆ.

“ಇವುಗಳನ್ನು ನಿಲ್ಲಿಸಿ ಎಂದು ಅಮಿತಾಬ್ ಬಚ್ಚನ್ ಹೇಳುವುದನ್ನು ನಾನು ಬಯಸಿದ್ದೆ. ಕಲಾವಿದನೊಬ್ಬ ಹೇಡಿಯಾದಾಗ ಸಮಾಜವು ಹೇಡಿಯಾಗಲು ನಾವು ಕಾರಣರಾಗುತ್ತೇವೆ” ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಹಾಗಾದರೆ ಅಮಿತಾಬ್ ಬಚ್ಚನ್ ಹೇಡಿಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಭಾವಿಸುತ್ತೇನೆ. ಅವರನ್ನು ನಾನು ಗೌರವಿಸುತ್ತೇನೆ. ಆದರೆ ನಮ್ಮೊಂದಿಗೆ ಕೈಜೋಡಿಸಿ. ಇದು ಅತ್ಯಗತ್ಯವಾಗಿದೆ. ನೀವು ಒಂದು ಪಕ್ಷದ ವಿರುದ್ಧ ಮಾತನಾಡುತ್ತಿಲ್ಲ. ನೀವು ಒಂದು ಸಮಸ್ಯೆಯ ವಿರುದ್ಧ ಮಾತನಾಡುತ್ತೀರಿ” ಎಂದವರು ಹೇಳಿದರು.

“ನಾನು ಅವರೊಂದಿಗೆ ಮನವಿ ಮಾಡಿದೆ. ಅದು ನನ್ನ ಕರ್ತವ್ಯ. ಅವರಿಗೆ ಅದ್ಭುತವಾದ ಧ್ವನಿಯಿದೆ. ಅವರು ಈ ಬಗ್ಗೆ ಮಾತನಾಡಬೇಕು ಎಂದು ನಾನು ಬಯಸಿದೆ. ಆದರೆ ಈ ಬಗ್ಗೆ ನಾನು ಮಾತನಾಡಲು ಇಚ್ಛಿಸುವುದಿಲ್ಲ ಎಂದವರು ಹೇಳಿದರು. ಕಥುವಾ ಅತ್ಯಾಚಾರ ಪ್ರಕರಣದ ಮೂಲಕ ಜನರ ಒಂದು ಗುಂಪನ್ನು ಒಂದು ಸ್ಥಳದಿಂದ ತೆರಳುವಂತೆ ಮಾಡಲು ಬೆದರಿಸಲಾಯಿತು. ಆದರೆ ಕೇವಲ ಅವರು ನಿಮ್ಮ ಪಕ್ಷದವರು ಎಂಬ ಕಾರಣಕ್ಕೆ ನೀವು ಅವರ ಜೊತೆ ನಿಂತಿದ್ದೀರಿ” ಎಂದು ಪ್ರಕಾಶ್ ರೈ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News