ದಿಲ್ಲಿ: ಮೂವರು ಕಾಶ್ಮೀರಿ ಮಹಿಳೆಯರಿಗೆ ಹಲ್ಲೆ ನಡೆಸಿದ ತಂಡ

Update: 2018-05-11 15:16 GMT

ಹೊಸದಿಲ್ಲಿ, ಮೇ 11: ಮೂವರು ಕಾಶ್ಮೀರಿ ಮಹಿಳೆಯರು ಹಾಗು ಒಬ್ಬ ಪುರುಷನಿಗೆ ದಿಲ್ಲಿಯ ಕಾಲನಿಯೊಂದರಲ್ಲಿ ಸ್ಥಳೀಯ ನಿವಾಸಿಗಳು ಥಳಿಸಿರುವ ಘಟನೆ ನಡೆದಿದೆ. ಈ ಬಗೆಗಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಮಹಿಳೆಗೆ ಹಾಕಿ ಸ್ಟಿಕ್ ಗಳಲ್ಲಿ ದುಷ್ಕರ್ಮಿಗಳು ಥಳಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸ್ಥಳದಲ್ಲಿದ್ದವರು ನೋಡುತ್ತಿದ್ದರೇ ವಿನಃ ಸಹಾಯಕ್ಕೆ ಬರಲಿಲ್ಲ ಎಂದು ಆರೋಪಿಸಲಾಗಿದೆ.

ದಿಲ್ಲಿಯ ಸನ್ ಲೈಟ್ ಕಾಲನಿಯಲ್ಲಿ ಈ ಘಟನೆ ನಡೆದಿದೆ. ಕಾಲನಿಯಲ್ಲಿ ವಾಸವಿದ್ದ ಕಾಶ್ಮೀರಿಗಳನ್ನು ‘ಕಾಶ್ಮೀರಿಗಳು ಉಗ್ರಗಾಮಿಗಳು” ಎಂದು ಕೆಲವರು ಹಲವು ದಿನಗಳಿಂದ ನಿಂದಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಇವರು ಕಾಲನಿಯನ್ನು ತೊರೆಯುವಂತೆ ಗುಂಪೊಂದು ಬಲವಂತಪಡಿಸುತ್ತಿತ್ತು ಎನ್ನಲಾಗಿದೆ. “ಎರಡೂ ಕಡೆಯಿಂದ ದೂರುಗಳು ಬಂದಿವೆ. ಈ ಮೊದಲೂ ದೂರು ಬಂದಿತ್ತು. ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

“ನನ್ನ ಸಹೋದರಿಗೆ ನಿಂದಿಸಿ ಹಲ್ಲೆ ನಡೆಸಲಾಯಿತು. ನನ್ನ ಎಡಗೈ ಮುರಿದಿದೆ. ನಮ್ಮನ್ನು ಭೇಟಿಯಾಗಲು  ಬಂದಿದ್ದ ಅತಿಥಿಗೂ ಹಲ್ಲೆ ನಡೆಸಿದ್ದಾರೆ. ಇದು ಮೊದಲೇ ನಿರ್ಧರಿಸಿದ್ದಂತೆ ನಡೆದ ದಾಳಿಯಾಗಿದ್ದು, ಆರೋಪಿಗಳ ಬಳಿ ಹಾಕಿ ಸ್ಟಿಕ್ ಗಳಿತ್ತು” ಎಂದು ಕಾಶ್ಮೀರಿ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News