ಶಂಶೇರಾದಲ್ಲಿ ರಣಬೀರ್ ಆ್ಯಕ್ಷನ್ ಹೀರೋ

Update: 2018-05-12 13:36 GMT

ಹೆಚ್ಚುಕಮ್ಮಿ ರೋಮ್ಯಾಂಟಿಕ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ರಣಬೀರ್ ಕಪೂರ್ ಈಗ ಆ್ಯಕ್ಷನ್ ಹೀರೋ ಆಗಲು ಹೊರಟಿದ್ದಾರೆ. ಸದ್ಯ ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಣಬೀರ್ ಕಪೂರ್, ಶೀಘ್ರದಲ್ಲೇ ಯಶ್‌ರಾಜ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಳ್ಳಲಿರುವ ಆ್ಯಕ್ಷನ್-ಸಾಹಸಭರಿತವಾದ ಶಂಶೇರಾಕ್ಕೆ ಶೀಘ್ರದಲ್ಲೇ ಬಣ್ಣಹಚ್ಚಲಿದ್ದಾರೆ. ಶಂಶೇರಾ, ರಣಬೀರ್‌ಗೆ ಹೊಸ ಇಮೇಜ್ ನೀಡಲಿದೆ ಮಾತ್ರವಲ್ಲ, ಈ ಚಿತ್ರವು ಅವರ ವೃತ್ತಿಬದುಕಿನಲ್ಲೇ ಹೊಸ ಮೈಲುಗಲ್ಲೆನಿಸಲಿದೆಯಂತೆ. ಶಂಶೇರಾದಲ್ಲಿ ರಣಬೀರ್ ಡಕಾಯಿತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ನಾಯಕಿ ಸೇರಿದಂತೆ ಉಳಿದ ಪಾತ್ರಗಳ ಆಯ್ಕೆ ಇನ್ನಷ್ಟೇ ಆಗಬೇಕಿದ್ದು, ಎಲ್ಲಾ ಸರಿಹೋದಲ್ಲಿ ಶಂಶೇರಾ ಆಗಸ್ಟ್ ವೇಳೆಗೆ ಚಿತ್ರೀಕರಣ ಆರಂಭಿಸಲಿದೆ.

ಬ್ರಹ್ಮಾಸ್ತ್ರ, ಶಂಶೇರಾ ಮಾತ್ರವಲ್ಲದೆ ರಣಬೀರ್ ಕಪೂರ್ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘ಸಂಜೂ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಬಾಲಿವುಡ್‌ನ ಜನಪ್ರಿಯ ನಟ ಸಂಜಯ್‌ದತ್ತ್ ಕುರಿತಾದ ಈ ಬಯೋಪಿಕ್ ಚಿತ್ರದ ಟೀಸರ್ ಈಗಾಗಲೇ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಚಿತ್ರರಸಿಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News