ಹನ್ಸಿಕಾ ಈಗ ಆ್ಯಕ್ಷನ್ ಕ್ವೀನ್

Update: 2018-05-12 13:53 GMT

ತಮಿಳುಚಿತ್ರರಂಗದಲ್ಲಿ ಸದಾ ಬೇಡಿಕೆಯಲ್ಲಿರುವ ನಟಿಯೆನಿಸಿರುವ ಹನ್ಸಿಕಾ ಸದ್ಯ ವಿಕ್ರಮ್ ಪ್ರಭು ಅಭಿನಯದ ತುಪ್ಪಾಕಿ ಮುನ್ನೈ ಹಾಗೂ ಅಥರ್ವ ಜೊತೆಗೆ ಇನ್ನಷ್ಟೇ ಹೆಸರಿಡಬೇಕಾದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಅವರು ಉದಯೋನ್ಮುಖ ನಿರ್ದೇಶಕ ಯು.ಆರ್. ಜಮೀಲ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಲೂ ಒಪ್ಪಿಕೊಂಡಿದ್ದಾರೆ.

ಇದೊಂದು ಪಕ್ಕಾ ನಾಯಕಿ ಪ್ರಧಾನ ಚಿತ್ರ ವಾಗಿದ್ದು, ಹನ್ಸಿಕಾಗೆ ಅಭಿನಯ ಪ್ರದರ್ಶನಕ್ಕೆ ಇಲ್ಲಿ ಅತ್ಯುತ್ತಮ ಅವಕಾಶವಿದೆ. ಈ ಚಿತ್ರದಲ್ಲಿ ಹನ್ಸಿಕಾ ಜೋಕ್‌ಗಳನ್ನು ಸಿಡಿಸುವ ಜೊತೆಗೆ ರೋಚಕ ಸ್ಟಂಟ್ ದೃಶ್ಯಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆಂದು ನಿರ್ದೇಶಕ ಜಮೀಲ್ ಹೇಳುತ್ತಾರೆ.

ರೋಮಿಯೊ ಜೂಲಿಯಟ್ ಹಾಗೂ ಬೋಗನ್‌ನಂತಹ ಯಶಸ್ವಿ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಜಮೀಲ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News