×
Ad

ಕಮರಿಗೆ ಬಿದ್ದ ಖಾಸಗಿ ಬಸ್: 7 ಸಾವು

Update: 2018-05-13 15:34 IST

ಶಿಮ್ಲಾ, ಮೇ 13: ಖಾಸಗಿ ಬಸ್ಸೊಂದು ಕಮರಿಗೆ ಉರುಳಿ ಬಿದ್ದ ಪರಿಣಾಮ 7 ಮಂದಿ ಮೃತಪಟ್ಟು 12 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ನಾನೇಟಿ ಎಂಬಲ್ಲಿ ಸಂಭವಿಸಿದೆ.

ಮಾನವ್ ನಿಂದ ರಾಜ್ ಗರ್ ಗೆ ಹೊರಟಿದ್ದ ಬಸ್ ಕಮರಿಗೆ ಬಿದ್ದಿದೆ ಎನ್ನಲಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಅಪಘಾತದಿಂದ 7 ಮಂದಿ ಮೃತಪಟ್ಟಿದ್ದು, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ರಕ್ಷಣಾ ಕಾರ್ಯ ಪ್ರಗತಿಯಲ್ಲಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News