ಉತ್ತರ ಪ್ರದೇಶದಲ್ಲಿ ನಾಯಿ ದಾಳಿಗೆ ಬಾಲಕಿ ಮೃತ್ಯು
Update: 2018-05-13 17:55 IST
ಸೀತಾಪುರ (ಉ.ಪ್ರ), ಮೇ.13: ಬೀದಿನಾಯಿಗಳ ಗುಂಪು ಹನ್ನೆರಡರ ಹರೆಯದ ಬಾಲಕಿಯ ಮೇಲೆ ದಾಳಿ ನಡೆಸಿ ಆಕೆಯನ್ನು ಕೊಂದು ಹಾಕಿದ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ರವಿವಾರ ನಡೆದಿದೆ. ಕಳೆದ ಆರು ತಿಂಗಳಲ್ಲಿ 13 ಮಕ್ಕಳು ನಾಯಿ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಖೈರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹೇಶ್‌ಪುರ ಗ್ರಾಮದ ರೀನಾ ಮೃತಪಟ್ಟ ಬಾಲಕಿ. ಮೇ ತಿಂಗಳಲ್ಲಿ ನಡೆದ ಏಳನೇ ಘಟನೆ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೀದಿನಾಯಿಗಳ ಹಾವಳಿಯನ್ನು ತಡೆಯಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲೆಲ್ಲ ಗುಂಪಿನಲ್ಲಿ ಐದರಿಂದ ಆರು ನಾಯಿಗಳು ಇರುತ್ತಿದ್ದವು ಈಗ ಅವುಗಳ ಸಂಖ್ಯೆ ಎರಡರಿಂದ ನಾಲ್ಕಕ್ಕೆ ಸೀಮಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.