×
Ad

ತೇಜ್ ಪ್ರತಾಪ್ ಮದುವೆಯಿಂದ ಮರಳುತ್ತಿದ್ದಾಗ ರಸ್ತೆ ಅಪಘಾತ: ಮೂವರು ಆರ್‌ಜೆಡಿ ನಾಯಕರು ಬಲಿ

Update: 2018-05-13 19:02 IST

ಅರಾರಿಯಾ(ಬಿಹಾರ),ಮೇ 13: ಅರಾರಿಯಾ ಜಿಲ್ಲೆಯ ಸಿಮ್ರಹಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರವಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲೂಪ್ರಸಾದ್ ಯಾದವ್ ಅವರ ಪುತ್ರ ತೇಜಪ್ರತಾಪ್ ಯಾದವ್ ಅವರ ಮದುವೆಯ ಪಾರ್ಟಿಯನ್ನು ಮುಗಿಸಿಕೊಂಡು ಮರಳುತ್ತಿದ್ದ ಪಕ್ಷದ ಮೂವರು ನಾಯಕರು ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

 ಲಕ್ನೋದಿಂದ ಕಿಷನಗಂಜ್‌ಗೆ ತೆರಳುತ್ತಿದ್ದ ಕಾರು ಆರು ಗಂಟೆಯ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ವಿಭಾಜಕವನ್ನು ಭೇದಿಸಿ ಎದುರಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದರು.

ಪಕ್ಷದ ಕಾರ್ಯಕರ್ತ ಹಾಗೂ ಮಾಜಿ ಸಚಿವ ಇಸ್ಲಾಮುದ್ದೀನ್ ಅವರ ಪುತ್ರ ಇಕ್ರಮುಲ್ ಹಕ್ ಬಾಘಿ,ಕಿಷನಗಂಜ್ ಜಿಲ್ಲಾ ಆರ್‌ಜೆಡಿ ಅಧ್ಯಕ್ಷ ಇಂತೆಕಾಬ್ ಆಲಂ,ದಿಘಲಗಂಜ್ ಬ್ಲಾಕ್ ಅಧ್ಯಕ್ಷ ಪಪ್ಪು ಮತ್ತು ಚಾಲಕ ಸಾಹಿಲ್ ಮೃತ ವ್ಯಕ್ತಿಗಳಾಗಿದ್ದಾರೆ.

ಚಾಲಕನಿಗೆ ನಿದ್ರೆಯ ಮಂಪರು ಆವರಿಸಿದ್ದು ಅಪಘಾತಕ್ಕೆ ಕಾರಣವಾಗಿರುವಂತಿದೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News