×
Ad

ಸಿಡಿಲಿಗೆ ಮೂವರು ರೈತರು ಬಲಿ

Update: 2018-05-13 19:12 IST

ಮಂಚೇರಿಯಲ್, ಮೇ.13: ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಭೀಮರಾಮ್ ಮಂಡಲ್‌ನ ಅರೆಪಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ರೈತರು ಸಾವನ್ನಪ್ಪಿರುವ ಘಟನೆ ರವಿವಾರ ಸಂಭವಿಸಿದೆ.

 ಮಿಂಚು ಮತ್ತು ಸಿಡಿಲಿನಿಂದ ಕೂಡಿದ ಅಕಾಲಿಕ ಮಳೆಯು ರಾಜ್ಯದಲ್ಲಿ ಆರ್ಥಿಕ ನಷ್ಟವನ್ನೂ ಉಂಟು ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಾಧ್ಯಮ ವರದಿಗಳ ಪ್ರಕಾರ, ಗ್ರಾಮದ ಹೊರಗಡೆಯಿದ್ದ ಗದ್ದೆಯಲ್ಲಿ ಭತ್ತದ ಫಸಲನ್ನು ರಕ್ಷಿಸುವ ಉದ್ದೇಶದಿಂದ ರೈತರು ರಾತ್ರಿ ಗದ್ದೆಯಲ್ಲೇ ಟೆಂಟ್ ನಿರ್ಮಿಸಿ ಮಲಗಿದ್ದರು. ರಾತ್ರಿ ಸುಮಾರು 3.00 ಮತ್ತು 5.30 ಗಂಟೆಯ ಮಧ್ಯೆ ಇವರು ಮಲಗಿದ್ದ ಟೆಂಟ್‌ಗೆ ಸಿಡಿಲು ಬಡಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News