ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿ ಕರಡು ನಿರ್ವಹಣಾ ಯೋಜನೆ ವರದಿಯ ಪ್ರತಿ ಸುಪ್ರೀಂಗೆ ಸಲ್ಲಿಕೆ
Update: 2018-05-14 14:33 IST
ಹೊಸದಿಲ್ಲಿ, ಮೇ 14: ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳಿಗೆ ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿ ಕರಡು ನಿರ್ವಹಣಾ ಯೋಜನೆ ವರದಿಯ ಪ್ರತಿಯನ್ನು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ
ಕೇಂದ್ರ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಯು.ಪಿ. ಸಿಂಗ್ ಅವರು ಕರಡು ನಿರ್ವಹಣಾ ಯೋಜನೆಯ 14 ಪುಟಗಳ ವರದಿಯ ಪ್ರತಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ , ನ್ಯಾಯಮೂರ್ತಿಗಳಾದ ಎ.ಎಂ ಖನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ ಕರಡು ನಿರ್ವಹಣಾ ಯೋಜನೆ ವರದಿಯ ಪ್ರತಿಯನ್ನು ಪರಿಶೀಲಿಸಲಿದೆ. ಫೆಬ್ರವರಿ 16ರಂದು ನೀಡಲಾಗಿರುವ ತನ್ನ ಆದೇಶಕ್ಕೆ ತಕ್ಕಂತೆ ಕರಡು ಇದೆಯೇ ಇಲ್ಲವೇ ಎಂಬುದನ್ನು ಎಂದು ಸುಪ್ರೀಂ ಕೋರ್ಟ್ ನ ನ್ಯಾಯಪೀಠ ಪರಿಶೀಲಿಸಲಿದೆ
ಮುಂದಿನ ವಿಚಾರಣೆಯನ್ನು ಮೇ 17ಕ್ಕೆ ಮುಂದೂಡಲಾಗಿದೆ