ನೋಟ್ ಬ್ಯಾನ್, ಜಿಎಸ್ ಟಿ ಪತಂಜಲಿಯ ಬೆಳವಣಿಗೆಗೆ ಹೊಡೆತ ನೀಡಿದೆ ಎಂದ ಆಡಳಿತ ನಿರ್ದೇಶಕ

Update: 2018-05-20 10:48 GMT

ಹೊಸದಿಲ್ಲಿ, ಮೇ 20: ನೋಟ್ ಬ್ಯಾನ್ ಹಾಗು ಜಿಎಸ್ ಟಿಯಿಂದಾಗಿ ಯೋಗಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಲಿ. ಕಂಪೆನಿಯ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಪತಂಜಲಿಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.

“ಹಿಂದಿನ ಹಣಕಾಸು ವರ್ಷದ ಆದಾಯದ ಮಟ್ಟದಲ್ಲೇ ಈ ವರ್ಷದ ಆದಾಯವೂ ಇದೆ” ಎಂದವರು Mint ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ. “ನೋಟ್ ಬ್ಯಾನ್ ಹಾಗು ಜಿಎಸ್ ಟಿಯ ದೀರ್ಘಕಾಲಿಕ ಪರಿಣಾಮಗಳು ಕಂಪೆನಿಯ ವೃದ್ಧಿಗೆ ಹೊಡೆತ ನೀಡಿದೆ” ಎಂದವರು ಇದೇ ಸಂದರ್ಭ ಹೇಳಿದರು.

2017-18ರ ಹಣಕಾಸು ವರ್ಷದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗು ಸರಬರಾಜಿಗೆ ಹೆಚ್ಚಿನ ಗಮನ ನೀಡಿರುವುದೂ ಕಂಪೆನಿಯ ಆದಾಯ ವೃದ್ಧಿಗೆ ತೊಡಕಾಗಿರುವ ಸಾಧ್ಯತೆಯೂ ಇದೆ ಎಂದವರು ಹೇಳಿದರು.

ಪ್ರಧಾನಿ ಮೋದಿಯವರ ನೋಟ್ ಬ್ಯಾನ್ ನಡೆಯನ್ನು ಈ ಹಿಂದೆ ಬಾಬಾ ರಾಮ್ ದೇವ್ ಬೆಂಬಲಿಸಿದ್ದರು. ನೋಟ್ ಬ್ಯಾನ್ ನಡೆಯು 3ರಿಂದ 4 ಲಕ್ಷ ಕೋಟಿ ರೂ.ಗಳ ಹಗರಣವನ್ನು ಬಯಲಿಗೆಳೆಯಲಿದೆ ಎಂದವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News