ಸರಳ ಉಡುಪಿನಲ್ಲಿ, ಬರಿಗಾಲಲ್ಲಿ ಎಚ್ ಡಿಕೆ ಪ್ರಮಾಣ ಸಾಧ್ಯತೆ

Update: 2018-05-21 05:44 GMT

ಬೆಂಗಳೂರು, ಮೇ 21: ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ರೇಷ್ಮೆ ಪಂಚೆ, ರೇಷ್ಮೆ  ಶರ್ಟ್  ಖರೀದಿಸಿರುವ  ನಿಯೋಜಿತ ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು  ಚಪ್ಪಲಿ ಧರಿಸದೆ, ಬರಿಗಾಲಲ್ಲಿ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

   ಮೇ 23ರಂದು  ಮಧ್ಯಾಹ್ನ 12:30ಕ್ಕೆ ಸರಳ ಉಡುಪಿನಲ್ಲಿ  ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News