ಜಾತಿ ಆಧಾರಿತ ಶಾಲಾ ಫಲಿತಾಂಶ ಪ್ರಕಟಿಸಿ ವಿವಾದಕ್ಕಿಡಾದ ಮಧ್ಯಪ್ರದೇಶ ಶಿಕ್ಷಣ ಮಂಡಳಿ

Update: 2018-05-23 08:36 GMT

ಭೋಪಾಲ್, ಮೇ 23: ಮಧ್ಯ ಪ್ರದೇಶ ಮಾಧ್ಯಮಿಕ ಶಿಕ್ಷಣ ಮಂಡಳಿಯು 10ನೇ ಮತ್ತು 12ನೇ ಪರೀಕ್ಷೆಯ ಫಲಿತಾಂಶಗಳನ್ನು ಜಾತಿಯಾಧರಿತವಾಗಿ  ವಿಭಾಗಿಸಿ ವಿವಾದಕ್ಕೀಡಾಗಿದೆ.

ಮೇ 14ರಂದು ಬಿಡುಗಡೆಯಾದ ಅಧಿಕೃತ ಫಲಿತಾಂಶದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡವರನ್ನು ಇತರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಸಾಮಾನ್ಯ ಎಂದು ನಾಲ್ಕು ವಿಭಾಗಗಳ ಮೂಲಕ ಪ್ರತ್ಯೇಕಿಸಲಾಗಿದೆ. ಫಲಿತಾಂಶ ಪಟ್ಟಿಯಲ್ಲೂ 'ವಿಭಾಗದ ಅನುಸಾರ' ಎಂದು ಸ್ಪಷ್ಟವಾಗಿ ಬರೆಯಲಾಗಿದೆ.

ಕಾಂಗ್ರೆಸ್ ಪಕ್ಷ ಮಂಡಳಿಯ ಕ್ರಮವನ್ನು ಟೀಕಿಸಿ ಇದು ಜಾತಿ ಆಧರಿತ ಫಲಿತಾಂಶ ವ್ಯವಸ್ಥೆ ಎಂದು ಹೇಳಿದೆ. ವಿದ್ಯಾರ್ಥಿಗಳಿಗೆ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯುವುದು ಸುಲಭವಾಗಿಸಲು ಈ ರೀತಿ ಮಾಡಲಾಗಿದೆ ಎಂದು ಮಂಡಳಿಯ ಕ್ರಮವನ್ನು ಅಧ್ಯಕ್ಷ ಎಸ್ ಆರ್ ಮೊಹಂತಿ ಸಮರ್ಥಿಸಿಕೊಂಡಿದ್ದಾರೆ. ಈ ರೀತಿ ಫಲಿತಾಂಶ ಪ್ರಕಟಿಸಿದ್ದು ತಮ್ಮ ಮಂಡಳಿಯೊಂದೇ ಅಲ್ಲ ಎಂದೂ  ಅವರು ಹೇಳಿದ್ದಾರಲ್ಲದೆ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News