ಉದ್ಯೋಗದ ಭರವಸೆ ನೀಡಿ ಮಹಿಳೆಯ ಅತ್ಯಾಚಾರಗೈದ ಆರೋಪ: ಬಿಜೆಪಿ ನಾಯಕನ ಬಂಧನ

Update: 2018-05-23 08:56 GMT

ವಾರಣಾಸಿ, ಮೇ 23: ಉದ್ಯೋಗದ ಭರವಸೆ ನೀಡಿ ಮಹಿಳೆಯೊಬ್ಬರನ್ನು ಲಾಡ್ಜ್ ಒಂದರಲ್ಲಿ ಅತ್ಯಾಚಾರಗೈದ ಆರೋಪದಲ್ಲಿ ವಾರಣಾಸಿಯ ಬಿಜೆಪಿ ನಾಯಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಇಂಗ್ಲಿಷಿಯ ಲೈನ್ ನಲ್ಲಿರುವ ಲಾಡ್ಜ್ ನಲ್ಲಿ ಮಹಿಳೆ ಬಿಜೆಪಿಯ ಭದೋಹಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕನ್ಹೈಯಾ ಲಾಲ್ ಮಿಶ್ರಾನನ್ನು ಭೇಟಿಯಾದ ಸಂದರ್ಭ ಅತ್ಯಾಚಾರಗೈಯಲಾಗಿತ್ತು ಎಂದು ಆರೋಪಿಸಲಾಗಿದೆ.

ಉದ್ಯೋಗ ಕೊಡಿಸುವ ವಿಚಾರದಲ್ಲಿ ಸರಕಾರದ ಮಹಿಳಾ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿಸುವುದಾಗಿ ಮಿಶ್ರಾ ಭರವಸೆ ನೀಡಿದ್ದ. ಇದೇ ಕಾರಣ ನೀಡಿ ಮಹಿಳೆಯನ್ನು ಆತ ಲಾಡ್ಜ್ ಗೆ ಕರೆದಿದ್ದ ಎನ್ನಲಾಗಿದೆ. ಮಹಿಳೆ ಲಾಡ್ಜ್ ಕೋಣೆ ಪ್ರವೇಶಿಸುತ್ತಲೇ ಮಿಶ್ರಾ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿದೆ.

“ಕೂಡಲೇ ಮಹಿಳೆ ಬೊಬ್ಬಿಟ್ಟಿದ್ದು, ಲಾಡ್ಜ್ ನಲ್ಲಿದ್ದ ಇತರರಿಗೆ ಕೇಳಿಸಿತ್ತು. ಮಹಿಳೆಯು ಎಮರ್ಜನ್ಸಿ ಪೊಲೀಸ್ ರೆಸ್ಪಾನ್ಸ್ ಸಿಸ್ಟಮ್ ಗೆ ಡಯಲ್ ಮಾಡಿದ್ದರೆ ಉಳಿದವರು ಸಿಗ್ರಾ ಪೊಲೀಸರಿಗೆ ಮಾಹಿತಿ ನೀಡಿದ್ದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News