ರೈಲ್ವೆ ನಿಲ್ದಾಣದ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ!

Update: 2018-05-23 15:46 GMT

ಉತ್ತರ ಪ್ರದೇಶ, ಮೇ 23: ಆಸ್ಪತ್ರೆಗೆ ದಾಖಲಿಸಲು ವೈದ್ಯರು ಅನುಮತಿ ನಿರಾಕರಿಸಿದ ಕಾರಣ ಮಹಿಳೆಯೊಬ್ಬರು ರೈಲ್ವೆ ನಿಲ್ದಾಣದ ಶೌಚಾಲಯವೊಂದರಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಎತಾ ಎಂಬಲ್ಲಿ ನಡೆದಿದೆ.

ಮಹಿಳೆಯ ಪರಿಸ್ಥಿತಿಯು ಸಾಮಾನ್ಯವಾಗಿಲ್ಲ ಎಂದು ಹೇಳಿ ವೈದ್ಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿರಲಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಮಹಿಳೆ ರೈಲ್ವೆ ನಿಲ್ದಾಣದ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ವೈದ್ಯರು ಹಾಗು ವೈದ್ಯಕೀಯ ಸವಲತ್ತುಗಳ ತಕ್ಷಣಕ್ಕೆ ಲಭಿಸದೆ ಇದ್ದುದರಿಂದ ಮಗು ಕೊನೆಯುಸಿರೆಳೆದಿದೆ.

ವಿಷಯ ತಿಳಿದ ರೈಲ್ವೆ ಅಧಿಕಾರಿಗಳು ತಕ್ಷಣ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. “ರೈಲ್ವೆ ನಿಲ್ದಾಣದ ಶೌಚಾಲಯದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು ನಮಗೆ ತಿಳಿದುಬಂತು. ಕೂಡಲೇ ನಾವು ಆ್ಯಂಬುಲೆನ್ಸ್ ಗೆ ಕರೆ ಮಾಡಿದೆವು. ಆದರೆ ನವಜಾತ ಶಿಶುವನ್ನು ಉಳಿಸಲು ಸಾಧ್ಯವಾಗಲಿಲ್ಲ” ಎಂದು ರೈಲ್ವೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News