ನಿಯಂತ್ರಣದಲ್ಲಿ ನಿಪಾಹ್ ವೈರಸ್ ಸೋಂಕು: ಕೇರಳ ಆರೋಗ್ಯ ಸಚಿವೆ

Update: 2018-05-23 15:59 GMT

 ತಿರುವನಂತಪುರ, ಮೇ 23: ಹತ್ತು ಜನರ ಸಾವಿಗೆ ಕಾರಣವಾದ ನಿಪಾಹ್ ವೈರಸ್ ಸೋಂಕನ್ನು ನಿಯಂತ್ರಿಸಲಾಗಿದೆ ಎಂದು ಬುಧವಾರ ಹೇಳಿರುವ ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ, ಆತಂಕಪಡುವ ಅಗತ್ಯ ಇಲ್ಲ ಎಂದಿದ್ದಾರೆ.

ಕೋಝಿಕೋಡ್ ವೈದ್ಯಕೀಯ ಕಾಲೇಜಿನಲ್ಲಿ 17 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಕೋಝಿಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗೆ ಸೀಮಿತಗೊಂಡಿದೆ ಎಂದು ಅವರು ಹೇಳಿದ್ದಾರೆ. ಆದರೆ, ಶಂಕಿತ ನಿಪಾಹ್ ಹಾಗೂ ಜ್ವರ ಇರುವ ಎರಡು ಹೊಸ ಪ್ರಕರಣಗಳು ಕೋಝಿಕೋಡ್‌ನಲ್ಲಿ ಬೆಳಕಿಗೆ ಬಂದಿವೆ. ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಶೈಲಜಾ ತಿಳಿಸಿದ್ದಾರೆ.

ನಿಪಾಹ್ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲಾಗಿದ್ದು, ಎಚ್ಚರ ವಹಿಸುವ ಅಗತ್ಯತೆ ಇದೆ ಎಂದು ಶೈಲಜಾ ತಿಳಿಸಿದ್ದಾರೆ. ‘‘ಈ ಇಬ್ಬರು ರೋಗಿಗಳ ಪೂರ್ಣ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ. ಬಾವಲಿಗಳ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯತೆ ಇಲ್ಲ. ಇಂತಹದೇ ಪ್ರಕರಣಗಳ ಚಿಕಿತ್ಸೆಗೆ ಸಾಮಾನ್ಯವಾಗಿ ಬಳಸುವ ರಿಬವಿರಿನ್ ಔಷಧ ಪೂರೈಸಲು ಸರಕಾರ ಕಾಯುತ್ತಿದೆ.’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News