ತೂತುಕುಡಿ: ಭದ್ರತಾ ಸಿಬ್ಬಂದಿಯ ಗುಂಡೇಟಿಗೆ ಮತ್ತೋರ್ವ ಬಲಿ

Update: 2018-05-23 18:17 GMT

ತೂತುಕುಡಿ, ಮೇ 23: ವೇದಾಂತ್ ಲಿಮಿಟೆಡ್‌ನ ತಾಮ್ರದ ಘಟಕ ಸ್ಟರ್ಲೈಟ್ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಬುಧವಾರ ಕೂಡ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಹಾರಿಸಿದ ಗುಂಡಿಗೆ ಯುವಕನೋರ್ವ ಬಲಿಯಾಗಿದ್ದಾನೆ.

ಅಣ್ಣಾ ನಗರದ 6ನೇ ಬೀದಿಯಲ್ಲಿ ಕೆಲ್ಲೆಸೆಯುತ್ತಿರುವ ಗುಂಪನ್ನು ಪೊಲೀಸ್ ತಂಡವೊಂದು ಓಡಿಸಿತು. ಆದಾಗ್ಯೂ ಗುಂಪು ಪೊಲೀಸ್ ಸಿಬ್ಬಂದಿ ಮೇಲಿನ ತನ್ನ ದಾಳಿ ತೀವ್ರಗೊಳಿಸಿತು. ಇದರಿಂದ ಪೊಲೀಸರು ಗುಂಡು ಹಾರಿಸಿದರು. ಪರಿಣಾಮ ನಾಲ್ವರು ಗಾಯಗೊಂಡರು. ಗಂಭೀರ ಗಾಯಗೊಂಡ ಕಾಳಿಯಪ್ಪನ್ಪ್ (23)ಆಸ್ಪತ್ರೆಯಲ್ಲಿ ಮೃತಪಟ್ಟರು.

ಇತರ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನಕಾರರ ಗುಂಪೊಂದು ಬ್ರಾಂತ್ ನಗರದಲ್ಲಿ ಎರಡು ಪೊಲೀಸ್ ಬಸ್‌ಗಳಿಗೆ ಬೆಂಕಿ ಹಚ್ಚಿತು. ಇದರಲ್ಲಿ ಒಂದು ಬಸ್ಸಿನ ಬೆಂಕಿಯನ್ನು ನಂದಿಸಲಾಯಿತು. ಇನ್ನೊಂದು ಬಸ್ ಉರಿದು ಬೂದಿಯಾಯಿತು.

ಹಿಂಸಾಚಾರ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕನ್ಯಾಕುಮಾರಿ, ತೂತುಕುಡಿ ಹಾಗೂ ತಿರುನಲ್ವೇಲಿ ಜಿಲ್ಲೆಗಳಲ್ಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿವಂತೆ ತಮಿಳುನಾಡು ಸರಕಾರ ಆದೇಶಿಸಿದೆ. ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ವದಂತಿ ಹರಡುವುದನ್ನು ತಡೆಯುವ ಕ್ರಮವಾಗಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸುವಂತೆ ಗೃಹ ಕಾರ್ಯದರ್ಶಿ ಸೇವಾದಾರರಲ್ಲಿ ಮನವಿ ಮಾಡಿದ್ದರು. ಘಟಕ ವಿಸ್ತರಣೆಗೆ ತಡೆ ತೂತುಕುಡಿಯಲ್ಲಿರುವ ವೇದಾಂತ ಲಿಮಿಟೆಡ್‌ನ ತಾಮ್ರ ಘಟಕ ಸ್ಟರ್ಲೈಟ್ ವಿಸ್ತರಣೆಗೆ ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ಪೀಠ ತಡೆ ನೀಡಿದೆ. ಘಟಕವನ್ನು ವಿಸ್ತರಿಸುವ ಮುನ್ನ ಸಾರ್ವಜನಿಕರೊಂದಿಗೆ ಸಮಾಲೋಚಿಸುವಂತೆ ಪೀಠ ಕಂಪೆನಿಗೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News