ಮೇಜರ್ ಗೊಗೊಯಿ ತಪ್ಪಿತಸ್ಥರೆಂದು ಸಾಬೀತಾದಲ್ಲಿ ಕಠಿಣ ಕ್ರಮ: ಸೇನಾ ಮುಖ್ಯಸ್ಥ ಜ.ರಾವತ್

Update: 2018-05-25 11:19 GMT

ಶ್ರೀನಗರ,  ಮೇ 25: ಇಲ್ಲಿನ ಹೊಟೇಲೊಂದರಲ್ಲಿ ಮಹಿಳೆಯ ಜೊತೆ ಮೇಜರ್ ಲೀತುಲ್ ಗೊಗೊಯಿಯವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್, “ಮೇಜರ್ ಗೊಗೊಯಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು" ಎಂದಿದ್ದಾರೆ.

“ಭಾರತೀಯ ಸೇನೆಯಲ್ಲಿರುವ ಯಾರೇ ಆಗಿದ್ದರೂ, ಯಾವುದೇ ರ್ಯಾಂಕ್ ನವರೇ ಆಗಿದ್ದರೂ ತಪ್ಪು ಮಾಡಿದ್ದೆಂದು ತಿಳಿದುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ರಾವತ್ ಹೇಳಿದರು.

“ಮೇಜರ್ ಗೊಗೊಯಿಯವರು ತಪ್ಪು ಮಾಡಿದ್ದು ಕಂಡುಬಂದಲ್ಲಿ ಅವರು ಶಿಕ್ಷೆಗೊಳಪಡುತ್ತಾರೆ ಎಂದು ನಾನು ಭರವಸೆ ನೀಡುತ್ತೇನೆ” ಎಂದವರು ಇದೇ ಸಂದರ್ಭ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News