ಅಮೆರಿಕದ ಪೆಸಿಫಿಕ್ ನೀತಿಯಲ್ಲಿ ಭಾರತವೇ ಮುಖ್ಯ

Update: 2018-05-25 18:07 GMT

ವಾಶಿಂಗ್ಟನ್, ಮೇ 25: ಪೆಸಿಫಿಕ್ ವಲಯಕ್ಕೆ ಸಂಬಂಧಿಸಿದ ಅಮೆರಿಕದ ನೀತಿಯನ್ನು ಭಾರತವನ್ನು ಕೇಂದ್ರವಾಗಿಟ್ಟುಕೊಂಡು ರೂಪಿಸಲಾಗುತ್ತದೆ ಹಾಗೂ ನಮ್ಮ ಅತ್ಯಂತ ಆಪ್ತ ಭಾಗೀದಾರರ ಪೈಕಿ ಅದು ಒಂದಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಗುರುವಾರ ಸೆನೆಟ್‌ಗೆ ತಿಳಿಸಿದ್ದಾರೆ.

‘‘ಹಲವಾರು ಕಾರಣಗಳಿಗಾಗಿ, ಭಾರತವನ್ನೇ ಕೇಂದ್ರವಾಗಿಟ್ಟುಕೊಂಡು ನಾವು ಕೆಲಸ ಮಾಡಬೇಕಾಗುತ್ತದೆ’’ ಎಂದು ಭಾರತ-ಅಮೆರಿಕ ಸಂಬಂಧಕ್ಕೆ ಸಂಬಂಧಿಸಿ ಸೆನೆಟರ್ ಒಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

‘‘ಅವರು (ಭಾರತ) ನಮ್ಮ ಅತ್ಯಂತ ಆಪ್ತ ಭಾಗೀದಾರರ ಪೈಕಿ ಓರ್ವರಾಗಿದ್ದಾರೆ’’ ಎಂದರು.

ಇದು ಅವರು ಎಪ್ರಿಲ್‌ನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತದ ಬಗ್ಗೆ ನೀಡಿದ ಪ್ರಥಮ ಹೇಳಿಕೆಯಾಗಿದೆ.

ಉಭಯ ದೇಶಗಳ ರಕ್ಷಣಾ ಮತ್ತು ವಿದೇಶ ವ್ಯವಹಾರಗಳ ಸಚಿವರ ನಡುವೆ ನಡೆಯಲಿರುವ ಜಂಟಿ ಸಭೆಯು ‘‘ತುಂಬಾ, ತುಂಬಾ ಅಗತ್ಯವಾಗಿದೆ’’ ಎಂದು ಪಾಂಪಿಯೊ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News