×
Ad

ಮಲೇಶ್ಯ: ಪರಾಜಿತ ಪ್ರಧಾನಿ ನಿವಾಸದಿಂದ 194 ಕೋಟಿ ರೂ. ವಶ

Update: 2018-05-25 23:42 IST

ಕೌಲಾಲಂಪುರ, ಮೇ 25: ಮಲೇಶ್ಯದ ಮಾಜಿ ಪ್ರಧಾನಿ ನಜೀಬ್ ರಝಾಕ್ ಸ್ಥಾಪಿಸಿರುವ ಸರಕಾರಿ ನಿಧಿಯ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ನಡೆಸುತ್ತಿರುವ ತನಿಖೆಯ ಭಾಗವಾಗಿ, ಹಲವಾರು ಅಪಾರ್ಟ್‌ಮೆಂಟ್‌ಗಳಿಂದ 114 ಮಿಲಿಯ ರಿಂಗಿಟ್ (ಸುಮಾರು 194 ಕೋಟಿ ರೂಪಾಯಿ) ನಗದು ಹಾಗೂ 400ಕ್ಕೂ ಅಧಿಕ ದುಬಾರಿ ಕೈಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಲೇಶ್ಯ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ನಜೀಬ್‌ರ ನಿವಾಸ, ಅವರ ಮಗ ಮತ್ತು ಮಗಳ ಅಪಾರ್ಟ್‌ಮೆಂಟ್‌ಗಳು ಸೇರಿದಂತೆ 12 ಕಟ್ಟಡಗಳನ್ನು ಮೇ 18ರಿಂದ ಶೋಧಿಸಲಾಗಿದೆ ಎಂದು ವಾಣಿಜ್ಯ ಅಪರಾಧ ವಿಭಾಗದ ಮುಖ್ಯಸ್ಥ ಅಮರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ಮೇ 9ರಂದು ದೇಶದಲ್ಲಿ ನಡೆದ ಚುನಾವಣೆಯಲ್ಲಿ ನಜೀಬ್ ಸೋಲನುಭವಿಸಿದ್ದಾರೆ. ತನ್ನ ಕುಟುಂಬದೊಂದಿಗೆ ವಿದೇಶಕ್ಕೆ ಹೋಗುವ ಅವರ ಪ್ರಯತ್ನವನ್ನು ಹಾಲಿ ಸರಕಾರ ವಿಫಲಗೊಳಿಸಿದೆ.

‘1ಮಲೇಶ್ಯ ಡೆವಲಪ್‌ಮೆಂಟ್ ಬರ್ಹಾದ್’ (1ಎಂಡಿಬಿ) ನಿಧಿಯಿಂದ ನಾಪತ್ತೆಯಾಗಿರುವ ನೂರಾರು ಕೋಟಿ ಡಾಲರ್ ಹಣದ ಬಗ್ಗೆ ನೂತನ ಸರಕಾರವು ಮರುತನಿಖೆಗೆ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News