ಪಾಕ್: ಈದ್ ಅವಧಿಯಲ್ಲಿ ಭಾರತೀಯ ಚಿತ್ರಗಳಿಗೆ ನಿಷೇಧ
Update: 2018-05-25 23:45 IST
ಕರಾಚಿ, ಮೇ 25: ಮುಂದಿನ ತಿಂಗಳ ಈದ್ ರಜಾ ದಿನಗಳಲ್ಲಿ ಭಾರತೀಯ ಚಿತ್ರಗಳ ಪ್ರದರ್ಶನದ ಮೇಲೆ ಪಾಕಿಸ್ತಾನ ತಾತ್ಕಾಲಿಕ ನಿಷೇಧ ವಿಧಿಸಿದೆ.
ಈದ್‌ನಿಂದ ಎರಡು ದಿನಗಳ ಮೊದಲಿನಿಂದ ಆರಂಭಿಸಿ ರಜೆ ಮುಗಿದ ನಂತರದ ಎರಡು ವಾರಗಳವರೆಗೆ ಭಾರತೀಯ ಮತ್ತು ವಿದೇಶಿ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಬಿಡುಗಡೆ ಮಾಡಿದ ಅಧಿಸೂಚನೆಯೊಂದು ತಿಳಿಸಿದೆ.
ಪಾಕಿಸ್ತಾನಿ ಚಿತ್ರ ಪ್ರದರ್ಶಕರು, ವಿತರಕರು ಮತ್ತು ಚಿತ್ರ ನಿರ್ಮಾಣ ಕಂಪೆನಿಗಳು ಮಾಡಿರುವ ಮನವಿಯ ಆಧಾರದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.