ನಂಬಿದರೆ ನಂಬಿ,ಬಿಟ್ಟರೆ ಬಿಡಿ....ಐದಡಿ ಎತ್ತರವಿದ್ದ ಈಕೆ ಈಗ ಎರಡು ಅಡಿಗಿಳಿದಿದ್ದಾಳೆ!

Update: 2018-05-26 10:58 GMT

ಯಾವುದೇ ವ್ಯಕ್ತಿ ಅವಘಡಕ್ಕೀಡಾದಾಗ ತಾನು ಕ್ಷೇಮವಾಗಿದ್ದೇನೆಯೇ ಮತ್ತು ಏನಾದರೂ ಗಾಯಗಳಾಗಿವೆಯೇ ಎನ್ನುವುದನ್ನು ಮೊದಲು ನೋಡಿಕೊಳ್ಳುತ್ತಾನೆ. ಗಾಯಗಳಾಗಿದ್ದರೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾನೆ ಮತ್ತು ಶೀಘ್ರ ಗುಣವಾಗುವುದನ್ನು ನಿರೀಕ್ಷಿಸುತ್ತಾನೆ.

ಆದರೆ ಔಷಧಿಗಳು ತಪ್ಪಾಗಿರುವ ಅಥವಾ ಶರೀರದ ಪ್ರತಿವರ್ತನೆ ಯಿಂದ ವ್ಯಕ್ತಿಯು ಇನ್ನೆಂದೂ ಮೊದಲಿನಂತೆ ಬದುಕಲು ಸಾಧ್ಯವಾಗದ ಸಂದರ್ಭಗಳೂ ಬರಬಹುದು.

ಈಕೆ ಶಾಂತಿ ದೇವಿ

ಇಲ್ಲಿದೆ ಇಂತಹುದೊಂದು ಆಘಾತಕಾರಿ ಪ್ರಕರಣ. ಉತ್ತರ ಪ್ರದೇಶದ ಕಾನ್ಪುರದ ನಿವಾಸಿ ಶಾಂತಿದೇವಿ ಅಪರೂಪದ ರೋಗದಿಂದ ನರಳುತ್ತಿದ್ದು,ಕಳೆದ 25 ವರ್ಷಗಳಲ್ಲಿ ಆಕೆಯ ಎತ್ತರ ಐದು ಅಡಿಗಳಿಂದ ಎರಡು ಅಡಿಗಳಿಗೆ ಕುಗ್ಗಿದೆ!

ಇಂಟರ್ನೆಟ್ ಸೆನ್ಸೇಷನ್

60ರ ಹರೆಯದ ಶಾಂತಿ ದೇವಿ ಕಾನ್ಪುರದ ಧಾರು ಎಂಬಲ್ಲಿ ಪ್ರತಿನಿತ್ಯ ಸಾವನ್ನೇ ಬಯಸುತ್ತ ಬದುಕು ದೂಡುತ್ತಿದ್ದಾಳೆ. ವಿಶಿಷ್ಟ ಕಾರಣದಿಂದಾಗಿ ಆಕೆ ಇಂಟರ್ನೆಟ್ ಸೆನ್ಸೇಷನ್ ಆಗಿಬಿಟ್ಟಿದ್ದಾಳೆ. ಕಳೆದ 25 ವರ್ಷಗಳಿಂದಲೂ ಆಕೆಯ ಎತ್ತರ ನಿರಂತರವಾಗಿ ಕುಗ್ಗುತ್ತಲೇ ಇದೆ. ಹಿಂದೆ ಆಕೆ ಅವಘಡಕ್ಕೆ ಗುರಿಯಾಗಿದ್ದು ಗಾಯಗಳು ಗುಣವಾಗಿದ್ದವು,ಆದರೆ ಅವಘಡಕ್ಕೆ ಮೊದಲು ಐದು ಅಡಿ ಇದ್ದ ಆಕೆಯ ಎತ್ತರವೀಗ ಎರಡು ಅಡಿಗೆ ಇಳಿದಿದೆ.

ಮನೆಯ ಛಾವಣಿಯೇ ಕಂಟಕವಾಯಿತು

ಅಪಘಾತಕ್ಕೆ ಗುರಿಯಾಗುವ ಮುನ್ನ ಶಾಂತಿ ದೇವಿ ಎಲ್ಲರಂತೆ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಳು. ಅದೊಂದು ದಿನ ಮನೆಯ ಛಾವಣಿಯ ಒಂದು ಭಾಗ ಕುಸಿದು ಆಕೆಯ ಮೈಮೇಲೆಯೇ ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಪತಿ ಗಂಗಾಚರಣ ಕುಶ್ವಾಹ ಮತ್ತು ಇತರರು ಸೇರಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಗಳಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಮನೆಗೆ ವಾಪಸಾಗಿದ್ದಳು.

ಮೂಳೆಗಳಲ್ಲಿ ನೋವು

ಆದರೆ ಹಾಗೆ ಮನೆಗೆ ಮರಳಿದ ಬಳಿಕ ತನ್ನ ಮೂಳೆಗಳಲ್ಲಿ ನೋವಿನ ಬಗ್ಗೆ ಆಕೆ ದೂರಿಕೊಂಡಿದ್ದಳು. ಹೀಗಾಗಿ ಮಗ ವಿಮಲೇಶ ಆಕೆಯನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದ. ತಪಾಸಣೆ ನಡೆಸಿದ ವೈದ್ಯರು ಕೆಲವು ಔಷಧಿಗಳನ್ನು ಬರೆದುಕೊಟ್ಟಿದ್ದರು. ಇಷ್ಟಾದ ಬಳಿಕ ಆಕೆಯ ಎತ್ತರ ಕುಗ್ಗತೊಡಗಿತ್ತು.

ಔಷಧಿಗಳ ಸೇವನೆ ಆರಂಭಿಸಿದ ನಾಲ್ಕೇ ತಿಂಗಳುಗಳಲ್ಲಿ ಶಾಂತಿ ದೇವಿಯ ಎತ್ತರ ಅರ್ಧ ಅಡಿ ಕಡಿಮೆಯಾಗಿತ್ತು. ಹಲವಾರು ವೈದ್ಯರನ್ನು ಸಂಪರ್ಕಿಸಿದ್ದರೂ ಆಕೆಯ ಸಮಸ್ಯೆ ಮಾತ್ರ ಎಂದಿಗೂ ಬಗೆಹರಿಯಲಿಲ್ಲ. 25 ವರ್ಷಗಳ ಬಳಿಕ ಈಗ ಆಕೆ ಕೇವಲ ಎರಡು ಅಡಿ ಎತ್ತರವಿದ್ದಾಳೆ.

ವೈದ್ಯರು ಏನು ಹೇಳುತ್ತಾರೆ?

ಶಾಂತಿ ದೇವಿ ಅಸ್ಥಿರಂಧ್ರತೆಯಿಂದ ನರಳುತ್ತಿದ್ದಾಳೆ ಮತ್ತು ಆರಂಭದ ಹಂತಗಳಲ್ಲಿ ಇದನ್ನು ಗುರುತಿಸಲಾಗಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ . ಮಹಿಳೆಯರಲ್ಲಿಎಸ್ಟ್ರೋಜನ್ ಹಾರ್ಮೋನ್ ಕೊರತೆಯು ಅಸ್ಥಿರಂಧ್ರತೆಗೆ ಕಾರಣವಾಗುತ್ತದೆ.

ಮೋಜಿನ ವಸ್ತುವಾಗಿಬಿಟ್ಟಿದ್ದಾಳೆ

ದುರಂತವೆಂದರೆ ಬಿದ್ದಲ್ಲೇ ಬಿದ್ದುಕೊಂಡಿರುವ ಶಾಂತಿ ದೇವಿ ನೋವಿನಿಂದ ನರಳುತ್ತಿದ್ದರೆ ಆಕೆಯನ್ನು ನೋಡಲು ಬರುವವರ ಪಾಲಿಗೆ ಮೋಜಿನ ವಸ್ತುವಾಗಿಬಿಟ್ಟಿದ್ದಾಳೆ. ಈಕೆಯ ಫೋಟೊ ಕ್ಲಿಕ್ಕಿಸಲೆಂದೇ ದೇಶದ ವಿವಿಧೆಡೆಗಳಿಂದ ಜನರು ಬರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News