ಕೇರಳದಲ್ಲಿ ನಿಪಾಹ್ ವೈರಸ್ ಗೆ ಮತ್ತೊಂದು ಬಲಿ
Update: 2018-05-26 20:25 IST
ತಿರುವನಂತಪುರಂ, ಮೇ 26: ಮಾರಣಾಂತಿಕ ನಿಪಾಹ್ ವೈರಸ್ ಗೆ ಶನಿವಾರ ಉತ್ತರ ಕೇರಳದಲ್ಲಿ ಮತ್ತೊಬ್ಬರು ಬಲಿಯಾಗಿದ್ದು, ಈ ವೈರಸ್ ಗೆ ಬಲಿಯಾದವರ ಸಂಖ್ಯೆ 13ಕ್ಕೇರಿದೆ.
62 ವರ್ಷದ ಕಲ್ಯಾಣಿ ಅಮ್ಮ ಕಳೆದ ವಾರ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೂವರು ರೋಗಿಗಳು ಸ್ಥಿತಿ ಗಂಭೀರವಾಗಿದೆ. 21 ರೋಗಿಗಳ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿದುಬಂದಿದೆ.
ನಿಪಾಹ್ ವೈರಸ್ ಗೆ ಬಾವಲಿಗಳು ಕಾರಣವಲ್ಲ ಎನ್ನುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಚಿತವಾಗಿತ್ತು.