×
Ad

ಒಳ ನುಸುಳುವಿಕೆ ಯತ್ನ: ಐವರು ಉಗ್ರರ ಹತ್ಯೆ

Update: 2018-05-26 21:08 IST

ಶ್ರೀನಗರ, ಮೇ 26: ಜಮ್ಮು ಹಾಗೂ ಕಾಶ್ಮೀರದ ತಂಗ್ದಾರ್ ವಲಯದ ಗಡಿ ನಿಯಂತ್ರಣ ರೇಖೆಗುಂಟ ಒಳ ನುಸುಳುವಿಕೆ ಪ್ರಯತ್ನವನ್ನು ಶನಿವಾರ ವಿಫಲಗೊಳಿಸಿರುವ ಭದ್ರತಾ ಪಡೆ ಐವರು ಉಗ್ರರನ್ನು ಗುಂಡು ಹಾರಿಸಿ ಹತ್ಯೆಗೈದಿದೆ.

ಭದ್ರತಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಗಡಿಯಾದ್ಯಂತ ಶಾಂತಿ ಸ್ಥಾಪಿಸಲು ಒಳನುಸುಳುವಿಕೆ ನಿಲ್ಲಿಸಿ ಎಂದು ಸೇನಾ ವರಿಷ್ಠ ಜನರಲ್ ಬಿಪಿನ್ ರಾವತ್ ಪಾಕಿಸ್ತಾನಕ್ಕೆ ಕರೆ ನೀಡಿದ ಗಂಟೆಗಳ ಬಳಿಕ ಈ ಬೆಳವಣಿಗೆ ನಡೆದಿದೆ. ‘‘ಗಡಿಯಲ್ಲಿ ನಾವು ಶಾಂತಿ ಬಯಸುತ್ತೇವೆ. ಆದರೆ, ಪಾಕಿಸ್ತಾನದ ಕದನ ವಿರಾಮ ಉಲ್ಲಂಘಿಸುತ್ತಿದೆ ಎಂದು ನಿಮಗೆ ಗೊತ್ತಿದೆ. ಇದರಿಂದ ಸೊತ್ತು ಹಾಗೂ ಜೀವ ಹಾನಿಯಾಗುತ್ತಿದೆ. ಇಂತಹ ಪ್ರಕರಣಗಳ ಸಂದರ್ಭ ನಾವು ಪ್ರತಿದಾಳಿ ನಡೆಸುತ್ತೇವೆ. ಆದರೆ, ಪಾಕಿಸ್ತಾನ ಶಾಂತಿ ಬಯಸಿದರೆ, ಒಳನುಸುಳುವಿಕೆ ನಿಲ್ಲಿಸುವ ಮೂಲಕ ಅವರೇ ಉಪಕ್ರಮಗಳನ್ನು ತೆಗೆದುಕೊಳ್ಳಬೇಕು’’ ಎಂದು ಅವರು ಹೇಳಿದ್ದಾರೆ.

ಕಳೆದ ವಾರ, ಪವಿತ್ರ ರಮಝಾನ್ ಮಾಸ ಆರಂಭವಾಗುವ ಹಿನ್ನೆಲೆಯಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಕಾರ್ಯಾಚರಣೆ ರದ್ದುಗೊಳಿಸುವಂತೆ ಕೇಂದ್ರ ಸರಕಾರ ಆದೇಶಿಸಿತ್ತು. ಆದಾಗ್ಯೂ, ‘‘ಒಂದು ವೇಳೆ ದಾಳಿ ನಡೆದರೆ ಅಥವಾ ಅಮಾಯಕರ ಜೀವ ರಕ್ಷಣೆಗೆ ಅಗತ್ಯವಾದರೆ ಪ್ರತಿದಾಳಿ ಹಕ್ಕನ್ನು ಕಾಯ್ದಿರಿಸಿಕೊಳ್ಳಿ’’ ಎಂದು ಗೃಹ ಸಚಿವಾಲಯ ಭದ್ರತಾ ಪಡೆಗೆ ಸ್ಪಷ್ಟನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News