ತುಷ್ಟೀಕರಣ, ವಂಶ ರಾಜಕೀಯ ಅಂತ್ಯಗೊಳಿಸಿದ ಮೋದಿ: ಅಮಿತ್ ಶಾ
Update: 2018-05-26 21:12 IST
ಹೊಸದಿಲ್ಲಿ, ಮೇ 26: ಪ್ರಧಾನಿ ನರೇಂದ್ರ ಮೋದಿ ಅವರು ತುಷ್ಟೀಕರಣ ಹಾಗೂ ವಂಶ ರಾಜಕಾರಣಕ್ಕೆ ಅಂತ್ಯ ಹಾಡಿದ್ದಾರೆ ಹಾಗೂ ಅಭಿವೃದ್ಧಿ ರಾಜಕೀಯಕ್ಕೆ ಆದ್ಯತೆ ನೀಡಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತದ ನಾಲ್ಕನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಎನ್‌ಡಿಎ ಸರಕಾರದ ಸಾಧನೆಗಳ ಪಟ್ಟಿ ಮಾಡಿದರು. 2016ರಲ್ಲಿ ಗಡಿ ನಿಯಂತ್ರಣ ರೇಖೆಯಾದ್ಯಂತ ಸರ್ಜಿಕಲ್ ಸ್ಟೈಕ್ ಮಾಡುವ ಮೂಲಕ ಎದುರಾಳಿಗಳನ್ನು ನಿಗ್ರಹಿಸುವ ರಾಜಕೀಯ ಹಿತಾಸಕ್ತಿಯನ್ನು ಸರಕಾರ ಪ್ರದರ್ಶಿಸಿತ್ತು ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ತುಷ್ಟೀಕರಣ, ವಂಶ ರಾಜಕಾರಣ, ಜಾತಿವಾದಕ್ಕೆ ಅಂತ್ಯ ಹಾಡಿದ್ದಾರೆ ಹಾಗೂ ರಾಜಕೀಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದು ಶಾ ಹೇಳಿದರು.
ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಬಹುಕಾಲದಿಂದ ಬಾಕಿ ಉಳಿದಿದ್ದ ಒಂದೇ ಶ್ರೇಣಿ ಒಂದೇ ಪಿಂಚಣಿ ಸಮಸ್ಯೆ ಬಗೆಹರಿಸಲಾಯಿತು ಎಂದು ಅವರು ಹೇಳಿದರು.