×
Ad

ತೃತಿಯ ರಂಗ ರಚನೆ ಹತಾಶ ಪಕ್ಷಗಳ ಅರಾಜಕ ಮೈತ್ರಿ: ಅರುಣ್ ಜೇಟ್ಲಿ

Update: 2018-05-26 21:14 IST

ಹೊಸದಿಲ್ಲಿ, ಮೇ 26: ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ರಂಗದ ರಚನೆಯನ್ನು ‘‘ಕಲ್ಪಿತ ಪರ್ಯಾಯ’’ ಎಂದು ವ್ಯಾಖ್ಯಾನಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ‘ಹತಾಶ ರಾಜಕೀಯ ಪಕ್ಷಗಳ’ ಅರಾಜಕ ಸಂಯೋಜನೆಯನ್ನು ಮಹತ್ವಾಕಾಂಕ್ಷೆಯ ಭಾರತ ತಿರಸ್ಕರಿಸಲಿದೆ ಎಂದಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಾಲ್ಕನೇ ವರ್ಷಾಚರಣೆಯ ದಿನವಾದ ಶನಿವಾರ ಫೇಸ್‌ಬುಕ್‌ನಲ್ಲಿ ಹೇಳಿಕೆ ಪೋಸ್ಟ್ ಮಾಡಿರುವ ಜೇಟ್ಲಿ, ಈ ಚರ್ಚೆಯ ರಾಜಕೀಯ ಕಾರ್ಯಸೂಚಿ ಅರಾಜಕತೆಯಿಂದ ಕೂಡಿದ ಹತಾಶ ರಾಜಕೀಯ ಪಕ್ಷಗಳ ಸಂಯೋಜನೆ ಹಾಗೂ ಮೋದಿ ನಡುವಿನ ಪೈಪೋಟಿ ಎಂದಿದ್ದಾರೆ.

ಹತಾಶ ರಾಜಕೀಯ ಪಕ್ಷಗಳು ಸಂಘಟಿತವಾಗಲು ಪ್ರಯತ್ನಿಸುತ್ತಿವೆ. ಈ ಪಕ್ಷಗಳ ಕೆಲವು ನಾಯಕರು ವಿಶಿಷ್ಟ ಸ್ವಭಾವದವರು. ಇತರ ಸಂದರ್ಭಗಳಲ್ಲಿ ಅವರು ತಮ್ಮ ಸೈದ್ಧಾಂತಿಕ ನಿಲುವನ್ನು ಬದಲಾಯಿಸುತ್ತಾರೆ. ಟಿಎಂಸಿ, ಡಿಎಂಕೆ, ಟಿಡಿಪಿ, ಬಿಎಸ್ಪಿ ಹಾಗೂ ಜೆಡಿಎಸ್‌ನಂತರ ಹಲವು ಪಕ್ಷಗಳು ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡಿವೆ. ಈ ಪಕ್ಷಗಳು ಆಗಾಗ ತಮ್ಮ ರಾಜಕೀಯ ನಿಲುವನ್ನು ಬದಲಾಯಿಸಿಕೊಳ್ಳುತ್ತವೆ ಎಂದು ಜೇಟ್ಲಿ ಹೇಳಿದ್ದಾರೆ. ಮಹತ್ವಾಕಾಂಕ್ಷೆಯ ಸಮಾಜಗಳು ಅರಾಜಕತೆಯನ್ನು ಆಹ್ವಾನಿಸುವುದಿಲ್ಲ. ದೃಢ ರಾಷ್ಟ್ರ ಹಾಗೂ ಉತ್ತಮ ಆಡಳಿತದ ಅಗತ್ಯತೆ ಅರಾಜಕತೆ ಬಗ್ಗೆ ಅಸಹ್ಯಪಟ್ಟುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಮೈತ್ರಿಯಾಗಲು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹಗರಣ ಮುಕ್ತ ಸರಕಾರ ನೀಡಿದ್ದಾರೆ. ಐದನೇ ವರ್ಷದಲ್ಲಿ ನೀತಿ ಹಾಗೂ ಕಾರ್ಯಕ್ರಮದ ಏಕೀಕರಣಕ್ಕೆ ಗಮನ ಕೇಂದ್ರೀಕರಿಸಲಾಗುವುದು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News