ಬಳಕೆದಾರರ ಮಾಹಿತಿಯನ್ನು 3ನೆ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವ ಆರೋಪದ ಬಗ್ಗೆ ಪೇಟಿಎಂ ಪ್ರತಿಕ್ರಿಯೆ

Update: 2018-05-26 15:49 GMT

ಹೊಸದಿಲ್ಲಿ, ಮೇ 26: ಬಳಕೆದಾರರ ದತ್ತಾಂಶವನ್ನು ನಾವು ಯಾವುದೇ ಮೂರನೇ ವ್ಯಕ್ತಿ ಅಥವಾ ಸರಕಾರದೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಡಿಜಿಟಲ್ ಪೇಮೆಂಟ್ ಕಂಪೆನಿ ಪೇಟಿಎಂ ಶನಿವಾರ ಹೇಳಿದೆ. ‘‘ನಾವು ನಿಮ್ಮ (ಬಳಕೆದಾರರ) ದತ್ತಾಂಶವನ್ನು ಎಂದಿಗೂ ಯಾರೊಬ್ಬರೊಂದಿಗೂ ಅಂದರೆ ಯಾವುದೇ ಕಂಪೆನಿ, ಯಾವುದೇ ಸರಕಾರ ಅಥವಾ ಯಾವುದೇ ದೇಶದೊಂದಿಗೆ ಹಂಚಿಕೊಳ್ಳುವುದಿಲ್ಲ. ಪೇಟಿಎಂನಲ್ಲಿ ನಿಮ್ಮ ದತ್ತಾಂಶ ನಿಮ್ಮದು. ನಮ್ಮದಲ್ಲ ಅಥವಾ ಮೂರನೇ ವ್ಯಕ್ತಿ ಅಥವಾ ಸರಕಾರದ್ದಲ್ಲ’’ ಎಂದು ಪೇಟಿಎಂ ತನ್ನ ಬ್ಲಾಗ್‌ಸ್ಪಾಟ್‌ನಲ್ಲಿ ಹೇಳಿದೆ.

ಅತ್ಯಗತ್ಯದ ತನಿಖೆಗಳಿಗೆ ದತ್ತಾಂಶ ಬೇಕೆಂದಾಗ ಇಲ್ಲಿನ ನೆಲದ ಕಾನೂನು ಸಂಸ್ಥೆಗಳು ಕಾನೂನಾತ್ಮಕವಾಗಿ ಮನವಿ ಸಲ್ಲಿಸಿದರೆ ಮಾತ್ರ ದತ್ತಾಂಶ ನೀಡುವುದು ಪೇಟಿಎಂನ ನೀತಿ ಎಂದು ಅದು ಹೇಳಿದೆ. ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ವೀಡಿಯೊ ಬಗ್ಗೆ ಉಲ್ಲೇಖಿಸಿರುವ ಬ್ಲಾಗ್, ಪೇಟಿಎಂ ದತ್ತಾಂಶಗಳನ್ನು ಹಂಚಿಕೊಳ್ಳುತ್ತದೆ ಎಂದು ವೀಡಿಯೊ ತಪ್ಪಾಗಿ ಪ್ರತಿಪಾದಿಸಿದೆ ಎಂದಿದೆ. ಸತ್ಯಕ್ಕಿಂತ ಬೇರೇನೂ ಇಲ್ಲ ಎಂದು ಹೇಳಿರುವ ಬ್ಲಾಗ್ ಸ್ಪಾಟ್, ಈ ಹಿಂದೆ ಕಾನೂನು ಸಂಸ್ಥೆಗಳ ಕಾನೂನಾತ್ಮಕ ರೀತಿಯಲ್ಲಿ ಅಥವಾ ಸೂಕ್ತ ಪ್ರಕ್ರಿಯೆ, ದಾರಿಯ ಮೂಲಕ ನಾವು ಮನವಿ ಸ್ವೀಕರಿಸಿಲ್ಲ ಅಥವಾ ದತ್ತಾಂಶ ಹಂಚಿಕೊಂಡಿಲ್ಲ ಎಂದು ಬ್ಲಾಗ್ ಹೇಳಿದೆ.

ಅನುಮತಿ ನೀಡದ ಹೊರತು ನಾವು ಯಾವುದೇ ದತ್ತಾಂಶವನ್ನು ಯಾರೊಂದಿಗೂ ಹಂಚಿಕೊಂಡಿಲ್ಲ ಎಂದು ನೀವು ಖಚಿತವಾಗಿ ಭರವಸೆ ಇರಿಸಬಹುದು. ಇದು ನಮ್ಮ ನಡುವಿನ ಪವಿತ್ರ ನಂಬಿಕೆ ಎಂದು ಅದು ಹೇಳಿದೆ. ಇದನ್ನು ಹೊರತುಪಡಿಸಿ ಪೇಟಿಎಂ ದತ್ತಾಂಶ ಹಂಚಿಕೊಳ್ಳುತ್ತಿದೆ ಎಂದು ಪ್ರತಿಪಾದನೆ ಮಾಡುವ ಯಾವುದೇ ವ್ಯಕ್ತಿಗೆ ಕಂಪೆನಿಯ ನೀತಿಯ ಬಗ್ಗೆ ಅರಿವಿಲ್ಲ ಹಾಗೂ ಅವರು ಕಂಪೆನಿಯ ಪರವಾಗಿ ಮಾತನಾಡಲು ಮಾನ್ಯತೆ ಹೊಂದಿಲ್ಲ ಎಂದು ಬ್ಲಾಗ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News