×
Ad

ಮಹಾರಾಷ್ಟ್ರದ ಎರಡು ಲೋಕಸಭಾ ಸ್ಥಾನಗಳಿಗೆ ನಾಳೆ ಚುನಾವಣೆ

Update: 2018-05-27 20:40 IST

ಮುಂಬೈ,ಮೇ 27: ಮಹಾರಾಷ್ಟ್ರದ ಪಾಲ್ಘರ್ ಮತ್ತು ಭಂಡಾರಾ-ಗೊಂಡಿಯಾ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗಳು ಸೋಮವಾರ ನಡೆಯಲಿವೆ. ಈ ಚುನಾವಣೆಗಳ ಫಲಿತಾಂಶಗಳು ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುವುದರಿಂದ ಎಲ್ಲ ನಾಲ್ಕೂ ಪ್ರಮುಖ ಪಕ್ಷಗಳು ಜಯಕ್ಕಾಗಿ ಇನ್ನಿಲ್ಲದ ಕಸರತ್ತುಗಳನ್ನು ನಡೆಸಿವೆ.

 ಪಾಲ್ಘರ್ ಕ್ಷೇತ್ರದಲ್ಲಿ ಶಿವಸೇನೆಯು ದಿವಂಗತ ಬಿಜೆಪಿ ಸಂಸದ ಚಿಂತಾಮಣ ವನಗಾ ಅವರ ಪುತ್ರ ಶ್ರೀನಿವಾಸ ವನಗಾ ಅವರನ್ನು ಕಣಕ್ಕಿಳಿಸಿದೆ. ಇದು ಬಿಜೆಪಿಯ ಅಸಮಾಧಾನಕ್ಕೆ ಕಾರಣವಾಗಿದ್ದು,ಅದು ಕಾಂಗ್ರೆಸ್‌ನ್ನು ತೊರೆದು ಬಂದಿರುವ ರಾಜೇಂದ್ರ ಗಾವಿತ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ನಿಲ್ಲಿಸಿದೆ. ಪರಸ್ಪರ ಆರೋಪ-ಪ್ರತ್ಯಾರೋಪಗಳಂದ ಕೂಡಿದ್ದ ಚುನಾವಣಾ ಪ್ರಚಾರದ ಸಂದರ್ಭ ಶಿವಸೇನೆಯ ವರಿಷ್ಠ ಉದ್ಧವ ಠಾಕ್ರೆ ಅವರು ಮಿತ್ರಪಕ್ಷ ಬಿಜೆಪಿಯ ವಿರುದ್ಧ ಎಲ್ಲ ರೀತಿಗಳಿಂದಲೂ ದಾಳಿ ನಡೆಸಿದ್ದರು.

ದೇಶವನ್ನು ಕಾಡುತ್ತಿರುವ ವಿಕೋಪದ ವಿರುದ್ಧ ಒಗ್ಗಟ್ಟಾಗಿ ಹೋರಾಡುವಂತೆ ಪ್ರತಿಪಕ್ಷಗಳಿಗೆ ಕರೆ ನೀಡುವ ಮೂಲಕ ಬಿಜೆಪಿಯನ್ನು ಪರೋಕ್ಷವಾಗಿ ಚುಚ್ಚಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News