ಪತ್ರಕರ್ತೆ ರಾಣಾ ಅಯ್ಯೂಬ್‌ಗೆ ಜೀವಬೆದರಿಕೆ: ವಿಶ್ವಸಂಸ್ಥೆಯ ಮಾನವಹಕ್ಕು ತಜ್ಞರ ಕಳವಳ

Update: 2018-05-27 16:15 GMT

 ನ್ಯೂಯಾರ್ಕ್, ಮೇ 27: ಭಾರತೀಯ ಪತ್ರಕರ್ತೆ ರಾಣಾ ಅಯ್ಯೂಬ್‌ಗೆ ಜೀವಬೆದರಿಕೆ ಮುಂದುವರಿದಿರುವ ಬಗ್ಗೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ತಜ್ಞರ ಗುಂಪೊಂದು ರವಿವಾರ ತೀವ್ರ ಆತಂಕವನ್ನು ವ್ಯಕ್ತಪಡಿಸಿದೆ. ರಾಣಾ ಅವರ ರಕ್ಷಣೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಆಕೆಗೆ ಬೆದರಿಕೆಯೊಡ್ಡಿರುವ ಪ್ರಕರಣಗಳ ಬಗ್ಗೆ ಸಮರ್ಪಕ ಹಾಗೂ ಕೂಲಂಕಷ ತನಿಖೆ ನಡೆಸಬೇಕೆಂದು ಅದು ಆಗ್ರಹಿಸಿದೆ.

  ಈ ಆತಂಕಕಾರಿ ಬೆದರಿಕೆಗಳ ಹಿನ್ನೆಲೆಯಲ್ಲಿ ರಾಣಾ ಅಯ್ಯೂಬ್ ಅವರ ಪ್ರಾಣಕ್ಕೆ ಅಪಾಯವುಂಟಾಗಿರುವ ಬಗ್ಗೆ ನಾವು ತುಂಬಾ ಆತಂಕಿತರಾಗಿದ್ದೇವೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕು ತಜ್ಞರು ಜಂಟಿ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.ಕಳೆದ ವರ್ಷ ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೂ ಇದೇ ರೀತಿಯ ಬೆದರಿಕೆ ಕರೆಗಳು ಬಂದಿರುವುದನ್ನು ಮಾನವಹಕ್ಕು ತಜ್ಞರು ಸ್ಮರಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News