ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕಾಲಾ’ ಟ್ರೇಲರ್ ಬಿಡುಗಡೆ

Update: 2018-05-28 16:07 GMT

ಚೆನ್ನೈ, ಮೇ 28: ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕಾಲಾ’ ಚಿತ್ರದ ಟ್ರೇಲರ್ ಇಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮುಂಬೈಯ ಧಾರಾವಿಯಲ್ಲಿ ಬೆಳೆಯುವ ತಮಿಳುನಾಡಿನ ವ್ಯಕ್ತಿಯೊಬ್ಬನ ಕಥೆ ಕಾಲ ಚಿತ್ರದ್ದು ಎನ್ನಲಾಗುತ್ತಿದೆ. ಕಬಾಲಿ ನಂತರ ರಜಿನಿಕಾಂತ್-ಪಾ ರಂಜಿತ್ ಜೋಡಿಯ ಎರಡನೆ ಚಿತ್ರ ಇದಾಗಿದೆ. ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ನಾನಾ ಪಾಟೇಕರ್, ಹುಮಾ ಖುರೇಶಿ, ಪಂಕಜ್ ತ್ರಿಪಾಠಿ ಮುಖ್ಯಭೂಮಿಕೆಯಲ್ಲಿದ್ದಾರೆ.

ಜೂನ್ 7ರಂದು ಈ ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News