ಕರೆನ್ಸಿ ನೋಟುಗಳಲ್ಲಿ ಗಾಂಧಿ ಬದಲು ಸಾವರ್ಕರ್ ಭಾವಚಿತ್ರ ಬಳಸಿ: ಕೇಂದ್ರ ಸರಕಾರಕ್ಕೆ ಹಿಂದೂ ಮಹಾಸಭಾ ಮನವಿ

Update: 2018-05-29 10:31 GMT

ಹೊಸದಿಲ್ಲಿ, ಮೇ 29: ಭಾರತದ ಕರೆನ್ಸಿ ನೋಟುಗಳಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಚಿತ್ರ ತೆಗೆದು ಅದರ ಬದಲಿಗೆ ಸಾವರ್ಕರ್ ಭಾವಚಿತ್ರ  ಬಳಸಬೇಕೆಂದು ಅಖಿಲ ಭಾರತ ಹಿಂದೂ ಮಹಾಸಭಾ ಕೇಂದ್ರ ಸರಕಾರಕ್ಕೆ ಮನವಿ ಮಾಡಿದೆ. ಸಾವರ್ಕರ್ ಗೆ  ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಆಗ್ರಹಿಸಿದ್ದಾರೆ.

ಸಾವರ್ಕರ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಅವರ ಗೌರವಾರ್ಥವಾಗಿ ಕರೆನ್ಸಿ ನೋಟುಗಳಲ್ಲಿ ಅವರ ಚಿತ್ರವಿರಬೇಕೆಂದು ಮಹಾಸಭಾ ಹೇಳಿದೆ. 'ಹಿಂದುತ್ವ' ಎಂಬ ಪದವನ್ನು ಮೊದಲು ಬಳಸಲು ಆರಂಭಿಸಿದ್ದು ಸಾವರ್ಕರ್ ಆವರೇ ಆಗಿದ್ದು ಅವರ  ಕೃತಿ 'ಹಿಂದುತ್ವ : ಹೂ ಈಸ್ ಎ ಹಿಂದು' 1923ರಲ್ಲಿ ಪ್ರಕಟವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News