×
Ad

ಲೀಟರ್‌ಗೆ ಪೆಟ್ರೋಲ್ 7 ಪೈಸೆ, ಡೀಸೆಲ್ 5 ಪೈಸೆ ಇಳಿಕೆ

Update: 2018-05-31 20:36 IST

ಹೊಸದಿಲ್ಲಿ, ಮೇ 31: ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಯಲ್ಲಿ ಬುಧವಾರ ಇಳಿಕೆಯಾದ ಹಿನ್ನೆಲೆಯಲ್ಲಿ ಸತತ ಎರಡನೇ ದಿನವೂ ಪೆಟ್ರೋಲ್ ಬೆಲೆ ಲೀಟರಿಗೆ 7 ಪೈಸೆ ಹಾಗೂ ಡೀಸೆಲ್‌ಗೆ ಲೀಟರ್‌ಗೆ 5 ಪೈಸೆ ಇಳಿಕೆಯಾಗಿದೆ.

ಈಗ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 78.42ರಿಂದ ರೂ. 78.35ಕ್ಕೆ ಇಳಿಕೆಯಾಗಿದೆ ಎಂದು ರಾಜ್ಯ ಸ್ವಾಮಿತ್ವದ ತೈಲ ಕಂಪೆನಿ ಹೊರಡಿಸಿದ ಅಧಿಸೂಚನೆ ತಿಳಿಸಿದೆ. ಡೀಸೆಲ್ ಬೆಲೆ ಲೀಟರ್‌ಗೆ ರೂ. 69.30 ಇದ್ದುದು ರೂ. 69.25ಕ್ಕೆ ಇಳಿಕೆಯಾಗಿದೆ. ಕರ್ನಾಟಕ ವಿಧಾನ ಸಭೆ ಚುನಾವಣೆ ಫಲಿತಾಂಶದ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸತತ 16 ದಿನ ಏರಿಕೆಯಾಗಿತ್ತು. ಈಗ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆಯಾಗುತ್ತಿರುವುದು ಸತತ ಎರಡನೇ ದಿನ.

ಪೆಟ್ರೋಲ್ ಹಾಗೂ ಡೀಸೆಲ್ ಮೇ 14ರಿಂದ ನಿರಂತರ ಏರಿಕೆಯಾಗಿತ್ತು. ಅಲ್ಲಿಂದ ಇಲ್ಲಿವರೆಗೆ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ. 3.8 ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 3.38 ಏರಿಕೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News