ಸುಧಾರಿತ ಪಿನಾಕಾ ರಾಕೆಟ್ ಯಶಸ್ವಿ ಪರೀಕ್ಷಾರ್ಥ ಉಡಾವಣೆ

Update: 2018-05-31 16:17 GMT

ಬಾಲಸೂರು (ಒಡಿಶಾ), ಮೇ 31: ವ್ಯಾಪ್ತಿ ವರ್ಧಿತ ಹಾಗೂ ಮಾರ್ಗಸೂಚಿ ವ್ಯವಸ್ಥೆ ಹೊಂದಿರುವ ಪಿನಾಕಾ ರಾಕೆಟ್‌ನ ಸುಧಾರಿತ ಶ್ರೇಣಿಯನ್ನು ಒಡಿಶಾದ ಚಂಡಿಪುರದಿಂದ ಸತತ ಎರಡನೇ ದಿನವಾದ ಗುರುವಾರ ಕೂಡ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತು.

 ಬುಧವಾರ ಎರಡು ಸುತ್ತು ಯಶಸ್ವಿ ಪರಿಕ್ಷಾರ್ಥ ಉಡಾವಣೆ ನಡೆಸಿದ ಬಳಿಕ ಡಿಆರ್‌ಡಿಒ ಅಡಿಯಲ್ಲಿ ಬರುವ ಪಿಎಕ್ಸ್‌ಇಯ ಉಡಾವಣಾ ಕೇಂದ್ರದ ಮಲ್ಟಿ ಬ್ಯಾರಲ್ ಉಡಾವಕದಿಂದ ಗುರುವಾರ ಬೆಳಗ್ಗೆ 10.30ಕ್ಕೆ ಮತ್ತೆ ಉಡಾಯಿಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಮಾರ್ಗಸೂಚಿ ಹೊಂದಿರದ ಈ ಹಿಂದಿನ ಪಿನಾಕಾ ರಾಕೆಟ್ ಅನ್ನು ಹೈದರಾಬಾದ್‌ನ ಸಂಶೋಧನಾ ಕೇಂದ್ರ, ಇಮಾರತ್ (ಆರ್‌ಸಿಐ) ದಿಕ್ಸೂಚಿ, ಮಾರ್ಗದರ್ಶನ ಹಾಗೂ ನಿಯಂತ್ರಣ ಕಿಟ್ ಅಳವಡಿಸಿ ಮಾರ್ಗಸೂಚಿ ಹೊಂದಿರುವ ರಾಕೆಟ್ ಆಗಿ ಪರಿವರ್ತಿಸಿದೆ ಎಂದು ಅದು ಹೇಳಿದೆ.

 ಈ ಆರ್‌ಸಿಐ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಐಘಟನೆ ಅಡಿಯಲ್ಲಿ ಬರುತ್ತದೆ. ಈ ಪರಿವರ್ತನೆ ಪಿನಾಕಾದ ವ್ಯಾಪ್ತಿ ಹಾಗೂ ನಿಖರತೆ ವರ್ಧಿಸಲು ನೆರವು ನೀಡಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದ್ದಾರೆ. ಚಂಡಿಪುರದ ರಕ್ಷಣಾ ವಲಯದಲ್ಲಿರುವ ರಾಡರ್, ಇಲೆಕ್ಟೋ-ಆಪ್ಟಿಕಲ್ ವ್ಯವಸ್ಥೆ ಹಾಗೂ ಟೆಲಿಮೆಟ್ರಿ ವ್ಯವಸ್ಥೆ ತನ್ನ ಹಾರಾಟ ಮಾರ್ಗದ ಮೂಲಕ ರಾಕೆಟ್‌ನ ಜಾಡು ಹಿಡಿಯಿತು ಹಾಗೂ ಕಣ್ಗಾವಲು ಇರಿಸಿತು. ಪಿನಾಕಾ ಮಾರ್ಕ್-1ರಿಂದ ಪಿನಾಕಾ ಮಾರ್ಕ್-2ವನ್ನು ರೂಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News