×
Ad

‘ಮಹಾರಾಜ’ನನ್ನು ಕೊಳ್ಳಲು ಯಾರೂ ಇಲ್ಲ !

Update: 2018-05-31 22:41 IST

ಹೊಸದಿಲ್ಲಿ, ಮೇ 31: ನಷ್ಟದಲ್ಲಿರುವ ಏರ್ ಇಂಡಿಯಾದ ಹರಾಜು ಪ್ರಕ್ರಿಯೆ ಸಂದರ್ಭ ಯಾವುದೇ ಹರಾಜುಗಳನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ ಎಂದು ನಾಗರಿಕ ವಿಮಾನ ಯಾನ ಸಚಿವ ಟ್ವೀಟ್‌ನಲ್ಲಿ ಹೇಳಿದ್ದಾರೆ. ಹರಾಜುದಾರರು ಗುರುವಾರ ಸಂಜೆ 5 ಗಂಟೆ ಒಳಗೆ ‘ಆಸಕ್ತಿಯ ಅಭಿವ್ಯಕ್ತಿ’ (ಇಒಎಲ್) ಸಲ್ಲಿಸುವ ಅಗತ್ಯತೆ ಇತ್ತು. ಇಒಎಲ್ ಸಲ್ಲಿಸುವ ಗಡುವು ವಿಸ್ತರಿಸಿಲ್ಲ ಎಂದು ಎಂದು ವೈಮಾನಿಕ ಕಾರ್ಯದರ್ಶಿ ಆರ್.ಎನ್. ಚೌಬೆ ಹೇಳಿದ್ದಾರೆ.

 ವಾಸ್ತವ ಗಡು ಮೇ 14ಯ ಅದನ್ನು ತಿಂಗಳ ಅಂತ್ಯದ ವರಗೆ ವಿಸ್ತರಿಸಲಾಗಿತ್ತು. ಪರ್ಯಾಯ ವ್ಯವಸ್ಥೆ ಮೂಲಕ ಮಹಾರಾಜನನ್ನು ಮಾರಾಟ ಮಾಡಲು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಚೌಬೆ ಹೇಳಿದ್ದಾರೆ. ಪರ್ಯಾಯ ವ್ಯವಸ್ಥೆ ಎಂದರೆ ಹಣಕಾಸು ಸಚಿವರ ನೇತೃತ್ವದ ಸಚಿವರ ಗುಂಪಿನ ಮೂಲಕ ಮಾರಾಟ. ಹಲವು ಹರಾಜು ಸರಕಾರವನ್ನು ನಿರಾಶೆಗೊಳಿಸಿದೆ ಎಂದು ಮುಂಬೈ ಮೂಲದ ಸಂಶೋಧನ ಸಂಸ್ಥೆ ‘ಅನಲಿಸ್ಟ್’ ಹೇಳಿದೆ. ‘‘ಸರಕಾರ ದಿನಾಂಕ ಮುಂದೂಡಬಹುದು. ಆದರೆ, ಮಾರುಕಟ್ಟೆಯಲ್ಲಿ ಖರೀದಿಯ ಯಾವುದೇ ಆಸಕ್ತಿ ಕಾಣುತ್ತಿಲ್ಲ.’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News