ಕೋಝಿಕೋಡ್:ಶಾಲಾಕಾಲೇಜುಗಳ ಪುನರಾರಂಭ ಜೂ.12ಕ್ಕೆ ಮುಂದೂಡಿಕೆ

Update: 2018-06-02 15:01 GMT

ಕೋಝಿಕೋಡ್(ಕೇರಳ),ಜೂ.2: ಕೋಝಿಕೋಡ್ ಜಿಲ್ಲೆಯಲ್ಲಿನ ಎಲ್ಲ ಶಿಕ್ಷಣ ಸಂಸ್ಥೆಗಳ ಪುನರಾರಂಭವನ್ನು ಜೂ.12ಕ್ಕೆ ಮುಂದೂಡಲು ಕೇರಳ ಸರಕಾರವು ಶನಿವಾರ ನಿರ್ಧರಿಸಿದೆ. ಯುಪಿಎಸ್‌ಸಿ ಪರೀಕ್ಷೆಗಳನ್ನು ಹೊರತುಪಡಿಸಿ ಇತರ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ರಾಜ್ಯ ಲೋಕ ಸೇವಾ ಆಯೋಗವು ನಡೆಸುತ್ತಿದ್ದ ಸಂದರ್ಶನಗಳನ್ನೂ ಮುಂದೂಡಲಾಗಿದೆ.

ರಾಜ್ಯದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ ಸದಾನಂದನ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಸಂಬಂಧ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಮೇ 17ರಂದು ನಿಪಾಹ್ ವೈರಸ್ ದೃಢಪಟ್ಟಾಗಿನಿಂದ ರಾಜ್ಯದ ಎರಡು ಜಿಲ್ಲೆಗಳಲ್ಲಿ 16 ಜೀವಗಳು ಈ ಮಹಾಮಾರಿಗೆ ಬಲಿಯಾಗಿವೆ.

ಪರಿಸ್ಥಿತಿಯ ಪರಾಮರ್ಶೆಗಾಗಿ ಸೋಮವಾರ ತಿರುವನಂತಪುರದಲ್ಲಿ ಸರ್ವಪಕ್ಷ ಸಭೆಯು ನಡೆಯಲಿದೆ ಎಂದು ಶೈಲಜಾ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News